ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಮಲಯಾಳಂ ಸಿನಿಮಾ ಒಪ್ಪಿದ್ದಾರೆ!

shivnapri
Published on

ಸ್ಯಾಂಡಲ್‌ವುಡ್‌ ಶಿವರಾಜ್‌ ಕುಮಾರ್ ಫ್ಯಾನ್ಸ್ ಖುಷ್ ಆಗಿದ್ದಾರೆ. ಜೈಲರ್ ಚಿತ್ರದಲ್ಲಿರೋ ಶಿವಣ್ಣನ ಪಾತ್ರ ವೈರಲ್ ಆಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬೇಡಿಕೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಆದರೆ ಈ ಬೇಡಿಕೆ ಕನ್ನಡ ಇಂಡಸ್ಟ್ರೀಗೆ ಸಂಬಂಧಿಸಿದ್ದು ಅಲ್ವೇ ಅಲ್ಲ.


ಶಿವರಾಜ್ ಕುಮಾರ್ ಮಲೆಯಾಳಂ ಸಿನಿಮಾ ಮಾಡ್ತಿದ್ದಾರೆ ಅನ್ನುವ ಸುದ್ದಿ ಮೊನ್ನೆಯಿಂದಲೇ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಶಿವಣ್ಣ ಎಲ್ಲೂ ಹೇಳಿಕೊಂಡಿರಲಿಲ್ಲ ಅಂತಲೂ ಹೇಳಬಹುದೇನೋ. ಆದರೆ ಇದೀಗ ಶಿವಣ್ಣ ಮಲೆಯಾಳಂ ಸಿನಿಮಾ ಮಾಡೋದು ಕನ್ಫರ್ಮ್‌ ಆಗಿದೆ.


ಜೈಲರ್ ಸಿನಿಮಾ ಬಂದಮೇಲೆ ಶಿವರಾಜ್‌ ಕುಮಾರ್ ಕ್ರೇಜ್ ತಮಿಳುನಾಡಿನಲ್ಲಿ ಹೆಚ್ಚಾಗಿದೆ. ಮಂಡ್ಯ ಮೂಲದ ಡಾನ್ ನರಸಿಂಹ ಅನ್ನುವ ಪಾತ್ರ ಮಾಡಿದ್ಮೇಲೆ ಇದು ಅಲ್ಲಿಯ ಜನಕ್ಕೂ ಇಷ್ಟ ಆಗಿದೆ. ಆದರೆ ಇದೀ ಇದೇ ಶಿವಣ್ಣ ಮಲೆಯಾಳಂ ಸಿನಿಮಾರಂಗದಲ್ಲೂ ಬೇಡಿಕೆ ಹೆಚ್ಚಿಕೊಂಡಿದ್ದಾರೆ. ಒಂದೇ ಒಂದು ಸಿನಿಮಾ ಮಾಡದೇ ಇದ್ರೂ ಅಲ್ಲಿ ಶಿವಣ್ಣ ಹೆಸರು ಕೇಳುತ್ತಿದೆ.


ಪೃಥ್ವಿರಾಜ್ ಸುಕುಮಾರನ್ ಜೊತೆಗೆ ಒಂದು ಸಿನಿಮಾ ಮಾಡೋದಿದೆ. ಈಗಾಗಲೇ ಮಾತುಕತೆ ನಡೆಯುತ್ತಿದೆ. ಆದರೆ ಸಿನಿಮಾ ಟೈಟಲ್ ಏನೂ ಅನ್ನೋದು ಇನ್ನು ಗೊತ್ತಿಲ್ಲ. ಸಿನಿಮಾ ಮಾಡೋದು ಪಕ್ಕಾ ಆಗಿದೆ.


ನಟ ಪೃಥ್ವಿರಾಜ್ ನನಗೆ ಪರಿಚಯ ಎಂದ್ರು ಶಿವಣ್ಣ
ಪೃಥ್ವಿರಾಜ್ ಸುಕುಮಾರನ್ ಪರಿಚಯ ಇದ್ದಾರೆ. ಇವರ ಜೊತೆಗೆ ಒಂದು ಸಿನಿಮಾ ಮಾಡ್ತಿದ್ದೇನೆ ಎಂದು ಹೇಳಿ ಅವಸರದಲ್ಲಿಯೇ ಏರ್ಪೋರ್ಟ್ ಒಳಗೆ ಹೋಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net