ಸಾ.ರಾ. ಗೋವಿಂದುಗೆ ನಿಂದಿಸಿದ ಆರೋಪ: ನಟ ಜೈಜಗದೀಶ್​ ನೀಡಿದ ಸ್ಪಷ್ಟನೆ ಏನು?

Jai Jagadeesh
Published on

ಬೆಂಗಳೂರು: ನಿರ್ಮಾಪಕರಿಗೆ ದಿನಸಿ ಕಿಟ್ ವಿತರಣೆ ಸಂಬಂಧ ಸಾ.ರಾ. ಗೋವಿಂದು ನಡವಳಿಕೆ ವಿರೋಧಿಸಿದ್ದೇನೆ ಹೊರತು ಚಲನಚಿತ್ರ ವಾಣಿಜ್ಯ ಮಂಡಳಿ ಬಗ್ಗೆ ಆರೋಪ ಮಾಡಿಲ್ಲ ಎಂದು ಹೈಗ್ರೌಂಡ್ಸ್ ಪೊಲೀಸರಿಗೆ ನಟ, ನಿರ್ಮಾಪಕ ಜೈ ಜಗದೀಶ್ ಸ್ಪಷ್ಟನೆ ನೀಡಿದ್ದಾರೆ.

ಈಗಾಗಲೇ ವಾಣಿಜ್ಯ ಮಂಡಳಿಯಲ್ಲಿ ವಿಪತ್ತು ನಿಧಿ ಮೂಲಕ ಕೆಲವರ ಕಷ್ಟಕ್ಕೆ ಸ್ಪಂದಿಸಲಾಗಿತ್ತು. ನಿರ್ವಪಕರನ್ನು ಅನ್ನದಾತರು ಎಂದು ರಾಜ್​ಕುಮಾರ್ ಕರೆಯುತ್ತಿದ್ದರು. ಹೀಗಾಗಿ ಅವರ ಜನ್ಮದಿನಾಚರಣೆ ವೇಳೆ ರಾಜ್​ಕುಮಾರ್ ಇಚ್ಛೆಗೆ ವಿರೋಧವಾಗಿ ನಿರ್ವಪಕರಿಗೆ ದಿನಸಿ ಕೊಡುವುದು ಸರಿಯಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದೆ. ಆದರೆ, ನನ್ನ ಹೇಳಿಕೆ ಬಗ್ಗೆ ಗೋವಿಂದು ಅನಗತ್ಯವಾಗಿ ವಿವಾದ ಆಗುವಂತೆ ಮಾಡಿದ್ದಾರೆ.

ದಿನಸಿ ವಿತರಣೆ ಕಾರ್ಯಕ್ರಮ ವೈಯಕ್ತಿಕವೇ ಹೊರತು ವಾಣಿಜ್ಯ ಮಂಡಳಿ ಕಾರ್ಯಕ್ರಮವಲ್ಲ. ನಾನು ಗೋವಿಂದು ನಡವಳಿಕೆಗೆ ವಿರೋಧ ವ್ಯಕ್ತಪಡಿಸಿದ್ದೇನೆ ಹೊರತು ನಿಂದಿಸಿಲ್ಲ ಎಂದು ಜೈ ಜಗದೀಶ್ ತಿಳಿಸಿದ್ದಾರೆ. ಸಾ.ರಾ. ಗೋವಿಂದು ನೀಡಿದ ದೂರಿನ ಸಂಬಂಧ ಗುರುವಾರ ಜೈಜಗದೀಶ್ ವಿಚಾರಣೆಗೆ ಹಾಜರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net