ಜಾಹ್ನವಿಗೆ ಅವರಮ್ಮ ಶ್ರೀದೇವಿ ಕೊಟ್ಟ ಸಲಹೆ ಏನು?

Jahnavi Kapoor - Final
Published on

ಮುಂಬೈ: ಸಿನಿಮಾ ನಟ-ನಟಿಯರು ತಮ್ಮ ಮಕ್ಕಳನ್ನು ಚಿತ್ರರಂಗಕ್ಕೆ ಕರೆತರುವಾಗ ಒಂದಿಷ್ಟು ಸಲಹೆ-ಸೂಚನೆಗಳನ್ನು ಕೊಟ್ಟು ಕರೆದುಕೊಂಡು ಬಂದಿರುತ್ತಾರೆ. ಹೇಗಿರಬೇಕು, ಏನು ಮಾಡಬಾರದು ಎಂಬ ಹತ್ತು, ಹಲವು ವಿಷಯಗಳ ಬಗ್ಗೆ ಅವರಿಗೆ ಅರ್ಥ ಮಾಡಿಸಿರುತ್ತಾರೆ.

ಬಾಲಿವುಡ್​ನ ಸದ್ಯದ ಜನಪ್ರಿಯ ನಟಿಯಾಗಿರುವ ಜಾಹ್ನವಿ ಕಪೂರ್​ಗೆ ಅವರಮ್ಮ ಶ್ರೀದೇವಿ ಏನು ಸಲಹೆ ಕೊಟ್ಟಿದ್ದರು? ಇಂಥದ್ದೊಂದು ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಇದೇ ಪ್ರಶ್ನೆಯನ್ನು ಸಂದರ್ಶನವೊಂದರಲ್ಲಿ ಅವರ ಮುಂದಿಟ್ಟಾಗ, ಜಾಹ್ನವಿ ಕಡೆಯಿಂದ ಬಂದ ಉತ್ತರ ಏನು ಗೊತ್ತಾ?

'ನನ್ನಮ್ಮ ಇದ್ದಾಗ ನನಗೆ ಯಾವಾಗಲೂ ಒಂದು ಮಾತು ಹೇಳುತ್ತಿದ್ದರು. ಯಾವತ್ತೂ, ಯಾರ ಮೇಲೂ ಅವಲಂಬಿತಳಾಗಬೇಡ. ನಿನ್ನ ಬಲದಿಂದ ನೀನು ಬೆಳೆಯಬೇಕು. ಅದು ಬರೀ ಚಿತ್ರರಂಗದಲ್ಲಷ್ಟೇ ಅಲ್ಲ. ಎಲ್ಲೇ ಆದರೂ, ಯಾರ ಮೇಲೂ ಅವಲಂಬಿತಳಾಗದೆ ಬೆಳೆ ಎಂದು ಹೇಳುತ್ತಿದ್ದರು' ಎಂದು ಜಾಹ್ನವಿ ಹೇಳಿಕೊಂಡಿದ್ದಾರೆ.

ಪವರ್​ಫುಲ್​ ಮಹಿಳೆಯರಿಂದ ತಾನು ಬಹಳ ಸ್ಫೂರ್ತಿಗೊಂಡಿದ್ದೇನೆ ಎನ್ನುವ ಜಾಹ್ನವಿ, 'ಪವರ್​ಫುಲ್​ ಮಹಿಳೆಯರು ಯಾವತ್ತೂ ಯಾರ ಮೇಲೂ ಅವಲಂಬಿತವಾಗಿರುವುದಿಲ್ಲ. ತಾವೇ ಸ್ವಂತವಾಗಿ ಬೆಳೆಯುತ್ತಾರೆ' ಎಂದು ಜಾಹ್ನವಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net