PHOTO GALLERY| ‘ಪದವಿ ಪೂರ್ವ’ ಸೆಟ್​ಗೆ ಸರ್ಪ್ರೈಸ್​ ರೀತಿಯಲ್ಲಿ ಭೇಟಿ ಕೊಟ್ಟ ನವರಸ ನಾಯಕ ಜಗ್ಗೇಶ್

WhatsApp Image 2020-12-04 at 3.20.25 PM (1)
Published on

ಬೆಂಗಳೂರು: ಹರಿಪ್ರಸಾದ್ ಜಯಣ್ಣ ನಿರ್ದೇಶಿಸಿ, ಯೋಗರಾಜ್ ಭಟ್ ಹಾಗೂ ರವಿ ಶಾಮನೂರ್ ಅವರು ಜಂಟಿಯಾಗಿ ನಿರ್ಮಿಸುತ್ತಿರುವ ‘ಪದವಿಪೂರ್ವ‘ ಚಿತ್ರದ ಶೂಟಿಂಗ್ ಸೆಟ್‌ಗೆ ಹಿರಿಯ ನಟ ನವರಸನಾಯಕ ಜಗ್ಗೇಶ್ ಭೇಟಿ ನೀಡಿ ತಂಡಕ್ಕೆ ಶುಭಕೋರಿ ಹಾರೈಸಿದ್ದಾರೆ.

ತಮ್ಮ 40 ವರ್ಷಗಳ ಸಿನಿಪಯಣದ ಸಂಭ್ರಮದ ಮೂಡ್‌ನಲ್ಲಿರುವ ಜಗ್ಗೇಶ್ ಮಲ್ಲೇಶ್ವರದ ಸರ್ಕಾರಿ ಕಾಲೇಜಿನಲ್ಲಿ ನಟಡೆಯುತ್ತಿರುವ ‘ಪದವಿಪೂರ್ವ’ ಚಿತ್ರದ ಸೆಟ್‌ಗೆ ಸರ್ಪ್ರೈಸ್ ಭೇಟಿ ನೀಡಿದ್ದಲ್ಲದೆ, ಅದಾಗಲೇ ಚಿತ್ರೀಕರಿಸಿದ್ದ ಕೆಲ ದೃಶ್ಯಗಳನ್ನು ನೋಡಿ ಖುಷಿಪಟ್ಟು, ಚಿತ್ರದ ನಿರ್ದೇಶಕ ಹರಿಪ್ರಸಾದ್ ಜಯಣ್ಣ ಹಾಗೂ ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ಕಾರ್ಯದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ಚಿತ್ರತಂಡದೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ ಬೆರೆತು ಸಮಯ ಕಳೆದ ಜಗ್ಗೇಶ್, ಚಿತ್ರದ ಪ್ರಮುಖ ಪಾತ್ರದಾರಿಗಳಿಗೆ ಕೆಲವು ಅತ್ಯಮೂಲ್ಯ ಸಲಹೆಗಳನ್ನು ನೀಡುವ ಮೂಲಕ ತಮ್ಮ ಅನುಭವವನ್ನು ಧಾರೆ ಎರೆದು ಯುವ ನಟ ನಟಿಯರನ್ನು ಪ್ರೋತ್ಸಾಹಿಸಿದ್ದು ತಂಡದಲ್ಲಿದ್ದ ಉತ್ಸಾಹವನ್ನು ದುಪ್ಪಟ್ಟು ಮಾಡಿದೆ.

ಚಿತ್ರವು ಕಳೆದ ವಾರವಷ್ಟೇ ಮುಹೂರ್ತ ಆಚರಿಸಿಕೊಂಡಿದ್ದು, ಚಿತ್ರದ ಚಿತ್ರೀಕರಣ ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಭರದಿಂದ ಸಾಗುತ್ತಿದೆ. ಯುವ ತಾಂತ್ರಿಕ ವರ್ಗವನ್ನೊಳಗೊಂಡಿರುವ ‘ಪದವಿಪೂರ್ವ’ ಚಿತ್ರದಲ್ಲಿ ನಾಯಕನಾಗಿ ಪೃಥ್ವಿ ಶಾಮನೂರ್ ಹಾಗೂ ನಾಯಕಿಯರಾಗಿ ಅಂಜಲಿ ಅನೀಶ್ ಹಾಗೂ ಯಶಾ ಶಿವಕುಮಾರ್ ಅಭಿನಯಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net