

ಲಾಕ್ಡೌನ್ ಮುಗಿಯುತ್ತಿದ್ದಂತೆಯೇ ಜಗ್ಗೇಶ್ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಾರಿ ಅವರು ಸಖತ್ ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಹೊಸ ಫೋಟೋವನ್ನು ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಇಷ್ಟಕ್ಕೂ ಯಾಕೆ ಈ ಲುಕ್ ಎಂಬ ಪ್ರಶ್ನೆ ಬರಬಹುದು. ಯಾವುದಾದರೂ ಹೊಸ ಚಿತ್ರಕ್ಕೆ ಜಗ್ಗೇಶ್ ಈ ಲುಕ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರಾ? ಹಾಗೇನಿಲ್ಲ. ‘ಹಾಗೇ ಸುಮ್ಮನೆ ಓಲ್ಡ್ ಸ್ಟೈಲ್ ದರ್ಶನ. 1980, ಶ್ರೀರಾಮಪುರದ 7ನೇ ಮೇನ್ನ ಈಶನ ಪರಿಚಯ ತಮಾಷೆಗೆ’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಬಾಲಿವುಡ್ನ ಸಂಗೀತ ನಿರ್ದೇಶಕ ವಾಜಿದ್ ಖಾನ್ ನಿಧನ
ಅಷ್ಟೇ ಅಲ್ಲ, ಈ ಫೋಟೋ ಹಾಕುವುದರ ಜತೆಜತೆಗೆ, ಅವರು ಬಿಲ್ಡಪ್ ಬಗ್ಗೆಯೂ ಮಾತನಾಡಿದ್ದಾರೆ. ಈ ವಿಷಯವಾಗಿ ಅವರು ಯಾರ ಹೆಸರ ಪ್ರಸ್ತಾಪ ಮಾಡದಿದ್ದರೂ, ಈಗಿನವರು ಹೇಗೆ ಬಿಲ್ಡಪ್ ಕೊಡುತ್ತಾರೆ ಎಂದು ತಮ್ಮ ಟ್ವೀಟ್ನಲ್ಲಿ ಹೇಳಿಕೊಂಡಿದ್ದಾರೆ.
‘ಎಂಥಾ ಕಾಲಘಟ್ಟ ಇದು. ರಾಜ್, ವಿಷ್ಣು, ಅಂಬರೀಷ್, ಪ್ರಭಾಕರ್, ಶಂಕರ್ ಜಮಾನ ಕಂಡವರು ನಾವು. ಇಂದು ಜಾಲತಾಣ ಕುಬೇರನ ಬಿಲ್ಡಪ್ಗಳಿಗೆ ಜೈ ಅನ್ನಬೇಕಂತೆ! ಅಂದರೆ ಗ್ರೇಟ್, ಇಲ್ಲಾ ಎಂದರೆ ಚಿತ್ರಾನ್ನವಂತೆ. ಕರ್ಮವೇ, ಇದನ್ನು ಮೀರಿ ಬೆಳೆದ ಸಂತತಿ ನಾವು. ಇಂದು ಹುಟ್ಟು-ಸಾವು ಬರೀ ಜಾಲತಾಣದಲ್ಲೇ ನಿರ್ಧಾರ ಮಾಡದಿರಿ. ಅದನ್ನು ಮೀರಿ ಬೆಳೆದ ಸಂತತಿ ನಾವು. ನಾವು ನೋ ಬಿಲ್ಡಪ್’ ಎಂದು ಫೋಟೋ ಸಮೇತ ಟ್ವೀಟ್ ಮಾಡಿದ್ದಾರೆ ಜಗ್ಗೇಶ್.
ಅಷ್ಟೇ ಅಲ್ಲ, ಇನ್ನೂ ಸ್ವಲ್ಪ ಮುಂದುವರೆದು, ‘ಎಂಥಾ ಬಿಲ್ಡಪ್ ಕಾಲವಿದು. ಗನ್ಮನ್, ಬೌನ್ಸರ್ಸ್ ಇದ್ದವನ ಒಪ್ಪಿ ಯುಗೆಯುಗೆ ಅಂತೆ. ಎಲ್ಲಾ ಇದ್ದು ಸಾಮಾನ್ಯನಂತೆ ಬದುಕುವವ, ಎಲ್ಲೂ ಸಲ್ಲದ ಸಾಮಾನ್ಯನಂತೆ. ಯಾಕೆ? ವಾಕರಿಗೆ ಬರುತ್ತಿದೆ. ಇತ್ತೀಚಿನ ನಡವಳಿಕೆ ಕಂಡು. ತುಂಬಿದ ಕೊಡು ತುಳುಕೋಲ್ಲ.ಅರ್ಧ ತುಂಬಿದ ಕೊಡವೇ ಶಬ್ಧ ಜಾಸ್ತಿ. ಬಿಲ್ಡಪ್ಗೆ ಅಳಿಯದಿರಿ ಸಾಧನೆ. ಎಲ್ಲಾ ಬಿಲ್ಡಪ್ ಕೊಟ್ಟು ಬೋರ್ ಆಗಿದೆ’ ಎಂದು ಅವರು ಬರೆದುಕೊಂಡಿದ್ದಾರೆ.
ಇಷ್ಟಕ್ಕೂ ಜಗ್ಗೇಶ್ ಟಾಂಗ್ ಕೊಟ್ಟಿದ್ದು ಯಾರಿಗೆ? ಈ ಪ್ರಶ್ನೆಗೆ ಅವರೇ ಉತ್ತರಿಸಬೇಕು.