

ಬೆಂಗಳೂರು: 250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಕಿಲ್ಲರ್ ವೆಂಕಟೇಶ್ ಅನಾರೋಗ್ಯ ಪೀಡಿತರಾಗಿದ್ದು, ಅವರಿಗೆ ನಟರಾದ ಜಗ್ಗೇಶ್ ಮತ್ತು ದರ್ಶನ್ ಸಹಾಯ ಮಾಡಿದ್ದಾರೆ.
‘ರಣಧೀರ’ ಸೇರಿ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ನಟರಾಗಿದ್ದ ವೆಂಕಟೇಶ್ ಅವರು ಜಗ್ಗೇಶ್ ನಟನೆಯ ಸಿನಿಮಾಗಳಲ್ಲಿ ಕಾಯಂ ಕಲಾವಿದರಾಗಿದ್ದರು. ಈಗ ಲಿವರ್ ಫೆಲ್ಯೂರ್ನಿಂದಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಇವರ ನೆರವಿಗೆ ಮೊದಲು ನಿಂತಿದ್ದು ಜಗ್ಗೇಶ್. ಆರೋಗ್ಯ ಸಚಿವ ಶ್ರೀರಾಮುಲು ಮತ್ತು ಡಿಸಿಎಂ ಅಶ್ವತ್ಥ ನಾರಾಯಣ ಜತೆ ಮಾತನಾಡಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ದೊರೆಯುವಂತೆ ಮಾಡಿದ್ದಾರೆ. ನಂತರ ನಟ ದರ್ಶನ್ಗೆ ಜಗ್ಗೇಶ್ ಅವರೇ ಕರೆ ಮಾಡಿ ಪರಿಸ್ಥಿತಿ ವಿವರಿಸಿದ್ದಾರೆ. ಅದಕ್ಕೆ ಸ್ಪಂದಿಸಿದ ದರ್ಶನ್ ಒಂದು ಲಕ್ಷ ರೂ. ನೀಡಿದ್ದಾರೆ.
ಈ ಬಗ್ಗೆ ಟ್ವಿಟ್ಟರ್ನಲ್ಲಿ ಬರೆದುಕೊಂಡಿರುವ ಜಗ್ಗೇಶ್ 35 ವರ್ಷದಿಂದ ಕಲಾಸೇವೆ ಮಾಡಿರುವ ವೆಂಕಟೇಶನ ನೆರವಿಗೆ ಬಂದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಜತೆಗೆ ಚಿತ್ರರಂಗದ ಕೆಲವರು ವೆಂಕಟೇಶ್ರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ ಆರ್ಥಿಕ ಸಹಾಯವನ್ನು ಮಾಡುತ್ತಿದ್ದಾರೆ. ಲಿವರ್ ಕಸಿಗೆ ಹೆಚ್ಚಿನ ಹಣದ ಅವಶ್ಯಕತೆ ಇದ್ದು, ವೆಂಕಟೇಶ್ ಕುಟುಂಬ ಇನ್ನಷ್ಟು ನೆರವಿನ ನಿರೀಕ್ಷೆಯಲ್ಲಿದೆ.
ಪದ್ಮಾವತಿ (ವೆಂಕಟೇಶ್ ಪತ್ನಿ ಕರ್ನಾಟಕ ಬ್ಯಾಂಕ್, ಶ್ರೀರಾಂಪುರ ಶಾಖೆ, ಖಾತೆ ಸಂಖ್ಯೆ: 0652500105111801, IFSC: KARB0000065.