ಭಾರತದ ಸ್ಥಿತಿ ಚೆನ್ನಾಗಿಲ್ಲ, ಇಲ್ಲಿಗೆ ಬಂದ್ಬಿಡಮ್ಮ ಎಂದ ಪೋಷಕರಿಗೆ ನಟಿ ಜಾಕ್​ಲೀನ್ ಕೊಟ್ಟ​ ಉತ್ತರ ಏನಿರಬಹುದು?

Jacqueline
Published on

ಮುಂಬೈ: ಬಾಲಿವುಡ್​ ಸಿನಿಮಾರಂಗದಲ್ಲಿ ನೆಲೆಕಂಡುಕೊಂಡಿರುವ ಶ್ರೀಲಂಕನ್ ಬೆಡಗಿ ಜಾಕ್​ಲೀನ್​ ಫರ್ನಾಂಡೀಸ್​ ಸದ್ಯ ಮುಂಬೈನಲ್ಲಿಯೇ ಬೀಡು ಬಿಟ್ಟಿದ್ದಾರೆ. ಭಾರತದಲ್ಲಿ ಕೋವಿಡ್ ಎರಡನೇ ಅಲೆಯ ತೀವ್ರತೆ ಹೆಚ್ಚಿರುವ ಈ ಸಂದರ್ಭದಲ್ಲಿ ಮನೆಯವರಿಂದಲೂ ಹೆಚ್ಚು ಒತ್ತಡಕ್ಕೆ ಒಳಗಾಗಿದ್ದಾರೆ ಜಾಕ್​ಲೀನ್​. ಸದ್ಯಕ್ಕೆ ಭಾರತ ಬಿಟ್ಟು ಬಂದುಬಿಡಮ್ಮ ಎಂದು ನಿತ್ಯ ಕರೆ ಮಾಡಿ ಕೇಳಿಕೊಳ್ಳುತ್ತಿದ್ದಾರಂತೆ. ಆದರೆ, ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಜಾಕ್​ಲೀನ್​ ನಾನು ಇಲ್ಲೇ ಇರ್ತೇನೆ ಎಂದಿದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿ ಸದ್ಯ ಜಾಕ್​ಲೀನ್​ ಪೋಷಕರು ಬೆಹ್ರೆನ್​ ಮನೆಯಲ್ಲಿದ್ದಾರೆ. ಇಲ್ಲಿಗೆ ಬರುವಂತೆ ಒತ್ತಾಯಿಸುತ್ತಿದ್ದಾರೆ. ಈ ವಿಚಾರವನ್ನು ಸ್ವತಃ ಜಾಕ್​ಲೀನ್ ಹೇಳಿಕೊಂಡಿದ್ದಾರೆ. ಶ್ರೀಲಂಕಾದ ಒಂದಷ್ಟು ಸ್ನೇಹಿತರು ಮತ್ತು ನನ್ನ ಪೋಷಕರು ಸದ್ಯ ಬೆಹ್ರಿನ್​ನಲ್ಲಿದ್ದಾರೆ. ಭಾರತದ ಕೋವಿಡ್​ ಸ್ಥಿತಿಯನ್ನು ಟಿವಿಯಲ್ಲಿ ನೋಡಿ ಗಾಬರಿಯಾಗಿದ್ದಾರೆ. ಭಯದಲ್ಲಿಯೇ ನಿತ್ಯ ನನಗೆ ಕರೆ ಮಾಡಿ ಅಲ್ಲಿಗೆ ಬರುವಂತೆ ಕೇಳಿಕೊಳ್ಳುತ್ತಿದ್ದಾರೆ. ಆದರೆ, ನಾನು ಮಾತ್ರ ಅದ್ಯಾವುದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಇಲ್ಲಿ ಮಾಡಬೇಕಾದ ಕೆಲಸ ಬಹಳಷ್ಟಿದೆ. ಅದೆಲ್ಲವನ್ನು ಮುಗಿಸಿಕೊಂಡು ಬರುವುದಾಗಿ ಹೇಳಿಕೊಂಡಿದ್ದಾರೆ.

ಅಂದಹಾಗೆ, ಕಳೆದ ವರ್ಷ ಸಲ್ಮಾನ್ ಖಾನ್​ ಅವರ ಪಾನ್​​ವೆಲ್​ ಫಾರ್ಮ್​ ಹೌಸ್​ನಲ್ಲಿ ಕಾಲ ಕಳೆದಿದ್ದ ಜಾಕ್​ಲೀನ್​, ಅಲ್ಲಿಯೇ ಇದ್ದುಕೊಂಡು ಆಲ್ಬಂ ಹಾಡೊಂದರಲ್ಲಿಯೂ ಕಾಣಿಸಿಕೊಂಡಿದ್ದರು. ಸಲ್ಮಾನ್ ಜತೆಗೂಡಿ ದಿನಸಿ ಪದಾರ್ಥಗಳನ್ನೂ ಹಂಚಿಕೆ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net