ಇಶಾನ್​ಗೆ ಚೇತನ್ ನಿರ್ದೇಶನ; ರೆಮೋ ಬಿಡುಗಡೆ ನಂತರ ಹೊಸ ಚಿತ್ರ ಪ್ರಾರಂಭ

Ishan
Published on

ಬೆಂಗಳೂರು: ‘ಜೇಮ್ಸ್​’ ನಂತರ ನಿರ್ದೇಶಕ ಚೇತನ್ ಕುಮಾರ್ ಮುಂದೇನು ಮಾಡಬಹುದು ಎಂಬ ಕುತೂಹಲ ಎಲ್ಲರಿಗೂ ಸಹಜವಾಗಿಯೇ ಇತ್ತು. ಆ ಕುತೂಹಲಕ್ಕೆ ಈಗ ತೆರೆಬಿದ್ದಿದೆ. ಇಶಾನ್ ಅಭಿನಯದಲ್ಲಿ ಚೇತನ್ ಹೊಸ ಚಿತ್ರ ನಿರ್ದೇಶಿಸಲಿದ್ದು, ಈ ಚಿತ್ರ ಸೆಪ್ಟೆಂಬರ್​ನಲ್ಲಿ ಪ್ರಾರಂಭವಾಗುವ ಸಾಧ್ಯತೆ ಇದೆ. ‘ಜೇಮ್್ಸ’ ನಂತರ ನಿರ್ಮಾಪಕ ಕಿಶೋರ್ ಪತ್ತಿಕೊಂಡ ನಿರ್ಮಾಣದಲ್ಲಿ, ಶಿವರಾಜಕುಮಾರ್ ಅಭಿನಯದಲ್ಲಿ ಚೇತನ್ ನಿರ್ದೇಶಿಸತ್ತಾರೆ ಎಂಬ ಸುದ್ದಿ ಇತ್ತು. ಆದರೆ, ನಿರ್ವಪಕರು ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ, ಆ ಚಿತ್ರವನ್ನು ಮುಂದೂಡಲಾಗಿದೆ.

ಶಿವರಾಜಕುಮಾರ್ ಅಭಿನಯದ ಚಿತ್ರವು ಮುಂದಿನ ಮಾರ್ಚ್ ನಲ್ಲಿ ಪ್ರಾರಂಭವಾಗಲಿದ್ದು, ಅದಕ್ಕೂ ಮುನ್ನ ಇಶಾನ್ ಅಭಿನಯದ ಹೊಸ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಚೇತನ್. ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಚೇತನ್, ‘ಇಶಾನ್ ಅಭಿನಯದ ‘ರೆಮೋ’ ಬಿಡುಗಡೆಗೆ ಸಿದ್ಧವಾಗಿದ್ದು, ಆಗಸ್ಟ್​ನಲ್ಲಿ ತೆರೆಗೆ ಬರಲಿದೆ. ಆ ನಂತರ ಈ ಹೊಸ ಚಿತ್ರದ ಘೋಷಣೆ ಅಧಿಕೃತವಾಗಿ ಆಗಲಿದೆ. ಸದ್ಯದಲ್ಲೇ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ಫೈನಲ್ ಆಗಲಿದೆ’ ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net