ಗಿರಿರಾಜ್ ನಿರ್ದೇಶನದ ವೆಬ್​ಸರಣಿಯಲ್ಲಿ ಇಶಾ!

Isha Koppikar
Published on

ಕನ್ನಡದಲ್ಲಿ ವೆಬ್​ಸಿರೀಸ್ ನಿರ್ದೇಶಿಸಿದ ಮೊದಲಿಗರೆಂದರೆ ಅದು ‘ಜಟ್ಟ’ ಗಿರಿರಾಜ್. ಮೂರು ವರ್ಷಗಳ ಹಿಂದೆಯೇ ಅವರು ‘ರಕ್ತಚಂದನ’ ಎಂಬ ವೆಬ್​ಸಿರೀಸ್ ನಿರ್ದೇಶಿಸಿದ್ದರು. ಅದಾದ ಮೇಲೆ ಹಿಂದಿ ವೆಬ್​ಸರಣಿಯನ್ನು ನಿರ್ದೇಶಿಸುವುದಾಗಿ ಸುದ್ದಿಯಾಗಿತ್ತು. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಇಷ್ಟರಲ್ಲಿ ಚಿತ್ರೀಕರಣ ಸಹ ಶುರುವಾಗಬೇಕಿತ್ತು. ಡೇಟ್ ಸಮಸ್ಯೆಯಿಂದ ಮುಂದೂಡಲ್ಪಟ್ಟಿದ್ದ ಈ ಸರಣಿಯ ಚಿತ್ರೀಕರಣ, ಇದೀಗ ನವೆಂಬರ್​ನಲ್ಲಿ ಶುರುವಾಗಲಿದೆಯಂತೆ.

ನವೆಂಬರ್ ಮೂರನೆಯ ವಾರದಲ್ಲಿ ಗಿರಿರಾಜ್ ನಿರ್ದೇಶನದ ಹಿಂದಿ ವೆಬ್​ಸರಣಿಯ ಚಿತ್ರೀಕರಣ ಪ್ರಾರಂಭವಾಗಲಿದೆ. ಹರಿಯಾಣದ ರೋಹ್ಟಕ್​ನಲ್ಲಿ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. ಇದೊಂದು ಕ್ರೖೆಮ್ ಡ್ರಾಮಾ ಆಗಿದ್ದು, ಇಶಾ ಕೊಪ್ಪಿಕರ್, ‘ಹಾಲಿಡೇ’ ಚಿತ್ರದ ಖ್ಯಾತಿಯ ಫ್ರೆಡ್ಡಿ ಧಾರುವಾಲ, ರಾಕೇಶ್ ಬೇಡಿ ಮುಂತಾದವರು ನಟಿಸುತ್ತಿದ್ದಾರೆ. ಈ ಸರಣಿಯನ್ನು ಎಂಎಕ್ಸ್ ಪ್ಲೇಯರ್ ನಿರ್ವಿುಸುತ್ತಿದ್ದು, ಅಲ್ಲೇ ಪ್ರಸಾರವಾಗಲಿದೆ. 30 ದಿನಗಳ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದೆ.

ಈ ಹಿಂದೆ ಗಿರಿರಾಜ್ ನಿರ್ದೇಶನದ ‘ಮೈತ್ರಿ’ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದ ಕೃಷ್ಣಕುಮಾರ್, ಈ ಸರಣಿಯ ಛಾಯಾಗ್ರಹಣ ಮಾಡಲಿದ್ದಾರಂತೆ. ಮಿಕ್ಕಂತೆ ಕನ್ನಡದ ಹಲವು ತಂತ್ರಜ್ಞರು ಇಲ್ಲಿ ಕೆಲಸ ಮಾಡಲಿದ್ದಾರೆ. ಈ ಹೆಸರಿಡದ ವೆಬ್​ಸರಣಿಯು ಮುಂದಿನ ವರ್ಷದಿಂದ ಸ್ಟ್ರೀಮ್ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net