ಎಸ್​.ಪಿ.ಬಾಲಸುಬ್ರಹ್ಮಣ್ಯಂ ಬಯೋಪಿಕ್ ನಿರ್ಮಾಣಕ್ಕೆ ಸಿದ್ಧತೆ?

SPB
Published on

ಭಾರತ ಕಂಡ ಶ್ರೇಷ್ಠ ಗಾಯಕ ಎಸ್​ಪಿ ಬಾಲಸುಬ್ರಮಣ್ಯಂ ಅಗಲಿ ಆರು ತಿಂಗಳು ಗತಿಸಿವೆ. ದೈಹಿಕವಾಗಿ ಇಲ್ಲದಿದ್ದರೂ, ಸಾವಿರಾರು ಹಾಡುಗಳ ಮೂಲಕವೇ ಎಲ್ಲರ ನಡುವೆ ಜೀವಂತವಾಗಿದ್ದಾರೆ. ಇದೀಗ ಈ ದಂತಕತೆಯ ಜೀವನ ಆಧರಿಸಿ ಸಿನಿಮಾ ಮಾಡಲು ತೆರೆಮರೆಯಲ್ಲಿ ಸಿದ್ಧತೆಗಳು ನಡೆಯುತ್ತಿವೆ! ಪ್ಯಾನ್ ಇಂಡಿಯಾ ಪರಿಕಲ್ಪನೆಯಲ್ಲಿಯೇ ಎಸ್​ಪಿಬಿ ಬಯೋಪಿಕ್ ಮಾಡಲು ಪಕ್ಕದ ಕಾಲಿವುಡ್​ನಲ್ಲಿ ಚರ್ಚೆಗಳು ನಡೆಯುತ್ತಿವೆ. ‘

ಇತ್ತೀಚೆಗಷ್ಟೇ ಚೆನ್ನೈನಲ್ಲಿ ಎಸ್​ಪಿಬಿಗೆ ಗಾನ ನಮನ ಸಲ್ಲಿಸುವುದಕ್ಕಾಗಿ ಹೃದಯಾಂಜಲಿ ಎಂಬ ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಅಲ್ಲಿ ಬಯೋಪಿಕ್ ಮಾಡುವ ಇಂಗಿತ ವ್ಯಕ್ತವಾಗಿದ್ದು, ಕುಟುಂಬದ ಒಪ್ಪಿಗೆ ಸಿಕ್ಕರೆ ಸಿನಿಮಾ ಮಾಡುವುದಾಗಿ ಶುಭೋದಯಂ ಸಂಸ್ಥೆ ಚೇರ್​ವುನ್, ಉದ್ಯಮಿ ಲಕ್ಷ್ಮೀ ಪ್ರಸಾದ್ ತಿಳಿಸಿದ್ದಾರೆ. ಸದ್ಯ ಇದಕ್ಕೆ ಸಂಬಂಧಿಸಿದಂತೆ ಕುಟುಂಬದವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net