ವಿಕ್ರಮ್​ ಪತ್ನಿಯ ಫೋಟೋ ವೈರಲ್​! ಇಷ್ಟು ದಿನ ಮಡದಿಯ ಗುರುತನ್ನು ಗೌಪ್ಯವಾಗಿಟ್ಟಿದ್ದೇಕೆ ಸ್ಟಾರ್​ ನಟ? ಇಲ್ಲಿದೆ ಉತ್ತರ... Actor Vikram

Actor Vikram
Published on

Actor Vikram: ಸಿನಿಪ್ರಿಯರಿಗೆ ಹೀರೋ ಮತ್ತು ಹೀರೋಯಿನ್​ಗಳ ವೈಯಕ್ತಿಕ ಮಾಹಿತಿ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಅದರಲ್ಲೂ ನೆಚ್ಚಿನ ಕಲಾವಿದರ ವೈಯಕ್ತಿಕ ವಿಚಾರಗಳ ಬಗ್ಗೆ ತೀವ್ರ ಕುತೂಹಲವಿರುತ್ತದೆ. ಅವರು ಬಳಸುವ ಕಾರುಗಳು, ದಿನನಿತ್ಯ ಜೀವನದಲ್ಲಿ ಅವರ ಹವ್ಯಾಸಗಳು, ಧರಿಸುವ ಬಟ್ಟೆ, ಮೊಬೈಲ್​ ಹಾಗೂ ವಾಚ್​ ಬೆಲೆ ಎಷ್ಟು? ವಾಸಿಸುವ ಮನೆ ಎಷ್ಟು ಬೆಲೆ ಬಾಳುತ್ತದೆ? ಮತ್ತು ಯಾವ ಯಾವ ವಸ್ತುಗಳನ್ನು ಆಗಾಗ ಬಳಕೆ ಮಾಡುತ್ತಾರೆ? ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಇದಿಷ್ಟೇ ಅಲ್ಲದೆ, ಪತ್ನಿ ಹಾಗೂ ಮಕ್ಕಳ ಬಗ್ಗೆಯೂ ತಿಳಿದುಕೊಳ್ಳಲು ಬಯಸುತ್ತಾರೆ.

ಇದೀಗ ನಟ ವಿಕ್ರಮ್ ಅವರ ಪತ್ನಿ ಮತ್ತು ಮಕ್ಕಳ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೋಟೋದಲ್ಲಿ ವಿಕ್ರಮ್​ ಅವರ ಪತ್ನಿ ಶೈಲಜಾ ಬಾಲಕೃಷ್ಣನ್​ ನೋಡಿ ಎಲ್ಲರು ಅಚ್ಚರಿಗೊಂಡಿದ್ದಾರೆ. ಏಕೆಂದರೆ, ಮಗ ಮತ್ತು ಮಗಳನ್ನು ಬಿಟ್ಟರೆ ಇದುವರೆಗೂ ಕ್ಯಾಮೆರಾ ಮುಂದೆ ಪತ್ನಿಯನ್ನು ಕರೆತಂದಿಲ್ಲ. ಹೀಗಾಗಿ ವಿಕ್ರಮ್​ ಪತ್ನಿಯನ್ನು ಮೊದಲ ಬಾರಿಗೆ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.

ನಟ ವಿಕ್ರಮ್​ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ತಮ್ಮ ವಿಭಿನ್ನ ನಟನೆಯಿಂದಲೇ ಎಲ್ಲ ಭಾಷೆಯ ಸಿನಿರಸಿಕರಿಗೆ ಹತ್ತಿರವಾಗಿದ್ದಾರೆ. ತಮಿಳು ಚಿತ್ರರಂಗದಲ್ಲಿ ಸಿನಿಮಾಗೆಂದೇ ತನ್ನನ್ನು ತಾನು ಅರ್ಪಿಸಿಕೊಂಡವರಲ್ಲಿ ನಟ ಚಿಯಾನ್ ವಿಕ್ರಮ್ ಕೂಡ ಒಬ್ಬರು. ಚಿತ್ರರಂಗದಲ್ಲಿ ಯಶಸ್ಸಿಗಾಗಿ ಸುಮಾರು 15 ವರ್ಷಗಳ ಕಾಲ ಕಾಯುತ್ತಿದ್ದರು. ಇದೇ ಸಂದರ್ಭದಲ್ಲಿ ಗಲಾಟ್ಟಾ ಕುಟುಂಬಮ್ ಹಾಗೂ ಸಿರಗುಗಲ್​ ಸೇರಿದಂತೆ ಕೆಲವು ಟಿವಿ ಸರಣಿಗಳಲ್ಲಿ ಕಾಣಿಸಿಕೊಂಡರು. ಚಿತ್ರರಂಗದಲ್ಲಿ ಸಾಧನೆ ಮಾಡಲು ಹಲವು ದಿನಗಳಿಂದ ಕಾಯುತ್ತಿದ್ದ ವಿಕ್ರಮ್ ಆರಂಭದ ದಿನಗಳಲ್ಲಿ ಡಬ್ಬಿಂಗ್ ಕಲಾವಿದನಾಗಿ ವಿವಿಧ ನಟರಿಗೆ ತಮ್ಮ ಧ್ವನಿ ನೀಡಿದ್ದಾರೆ.

ನಟ ಪ್ರಭುದೇವ ಅಭಿನಯದ ಕಾದಲನ್​, ರಾಸಯ್ಯ, ಮಿನ್ಸಾರಾ ಕಣವು ಹಾಗೂ ವಿಐಪಿ ಹೀಗೆ ಹಲವಾರು ಸಿನಿಮಾಗಳಲ್ಲಿ ಪ್ರಭುದೇವ ಅವರಿಗೆ ಕಂಠದಾನ ಮಾಡಿದ್ದಾರೆ. ಅದೇ ರೀತಿ ನಟ ಅಜಿತ್ ಅವರ ಮೊದಲ ಚಿತ್ರವಾದ ಅಮರಾವತಿ ಹಾಗೂ ಪಾಸಮಲರ್ಗಳ್ ಚಿತ್ರದಲ್ಲಿ ಅಜಿತ್​ಗೆ ಧ್ವನಿ ನೀಡಿದ್ದಾರೆ.

ಪ್ರಸ್ತುತ ವಿಕ್ರಮ್​ ಅವರು ತಮಿಳು ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರಾಗಿದ್ದಾರೆ. ಅವರ ನಟನೆಯಲ್ಲಿ ತೆರೆಕಂಡ ಸೇತು ಸಿನಿಮಾದಲ್ಲಿ ವಿಕ್ರಮ್​ ನಟನೆಯನ್ನು ಕಂಡು ಸೆಲೆಬ್ರಿಟಿಗಳೇ ಅಚ್ಚರಿಗೊಂಡರು. ಈ ಸಿನಿಮಾ ಸೂಪರ್​ ಡೂಪರ್​ ಹಿಟ್​ ಆಯಿತು ಮತ್ತು ವಿಕ್ರಮ್​ಗೆ ಅವರದೇಯಾದ ಅಭಿಮಾನಿ ಬಳಗ ಹುಟ್ಟಿಕೊಂಡಿತು. ಇದಾದ ಬಳಿಕ ಪಿತಾಮಹನ್​, ಅನಿಯನ್​, ಕಂದಸ್ವಾಮಿ, ರಾವನ್​, ದೈವ ತಿರುಮಗಲ್ ಹಾಗೂ ಐ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಸಖತ್​ ಸದ್ದು ಮಾಡಿತು.

ಕೊನೆಯದಾಗಿ ಬಿಡುಗಡೆಯಾದ ತಂಗಲನ್​ ಸಿನಿಮಾ ಹಿಟ್ ಆಗಲಿಲ್ಲ ಆದರೆ, ವಿಕ್ರಮ್ ಅವರ ಅಭಿನಯ ಮಾತ್ರ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಯಿತು. ಇಷ್ಟೊಂದು ಜನಪ್ರಿಯರಾಗಿರುವ ನಟ ವಿಕ್ರಮ್ ತಮ್ಮ ಮಗಳು ಮತ್ತು ಮಗನನ್ನು ಕ್ಯಾಮೆರಾ ಮುಂದೆ ತೋರಿಸಿದ್ದಾರೆ. ಆದರೆ, ತಮ್ಮ ಪತ್ನಿಯನ್ನು ಈವರೆಗೆ ಹೊರಗೆ ತೋರಿಸಿಲ್ಲ. ಇದಕ್ಕೆ ಕಾರಣ ಸ್ಪಷ್ಟವಾಗಿಲ್ಲವಾದರೂ ವಿಕ್ರಮ್ ತಮ್ಮ ಕುಟುಂಬಕ್ಕೆ ಸ್ವಾತಂತ್ರ್ಯ ನೀಡಲು ಬಯಸುತ್ತಾರೆ ಎಂಬುದು ಸ್ಪಷ್ಟವಾಗಿದೆ.

Actor Vikram Family

ಹೀಗಿರುವಾಗ ಚಿಯಾನ್​ ವಿಕ್ರಮ್ ಅವರ ಪತ್ನಿ ಮತ್ತು ಮಕ್ಕಳ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಕ್ರಮ್​ ಅವರ ಪತ್ನಿ ಸುಂದರವಾಗಿದ್ದು, ಇಲ್ಲಿಯವರೆಗೆ ತಮ್ಮ ಪತ್ನಿಯನ್ನು ಸಾರ್ವಜನಿಕವಾಗಿ ಪರಿಚಯಿಸದೇ ರಹಸ್ಯವಾಗಿ ಇಟ್ಟಿದ್ದೇಕೆ ಎಂದು ಕೆಲ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net