ಅಮ್ಮ ನನ್ನ ಕರೀತಿದ್ದಾಳೆ ... ಇರ್ಫಾನ್​ ಖಾನ್ ಕೊನೆಯ ಮಾತುಗಳು

Irfan Khan Mother Final
Published on

ಬುಧವಾರವಷ್ಟೇ ನಿಧನರಾದ ಬಾಲಿವುಡ್‌ನ ಖ್ಯಾತ ನಟ ಇರ್ಫಾನ್​ ಖಾನ್ ಅವರ ಕೊನೆಯ ಕ್ಷಣಗಳು ಹೇಗಿದ್ದವು ಎಂಬುದನ್ನು ಅವರ ಪತ್ನಿ ಸುತಾಪಾ ಸಿಖ್ದರ್ ಹೇಳಿಕೊಂಡಿದ್ದಾರೆ. ಅವರು ಹೇಳುವಂತೆ, ಇರ್ಫಾನ್​ ತಮ್ಮ ತಾಯಿಯನ್ನು ಬಹಳ ನೆನಪಿಸಿಕೊಳ್ಳುತ್ತಿದ್ದಾರಂತೆ. ‘ಅಮ್ಮ ನನ್ನ ಕರೀತಿದ್ದಾಳೆ ...’ ಎಂದು ಕನವರಿಸುತ್ತಿದ್ದಳಂತೆ.

ಈ ಕುರಿತು ಮಾತನಾಡಿರುವ ಅವರು, ‘ಇರ್ಫಾನ್​ ತಮ್ಮ ತಾಯಿಯನ್ನು ಬಹಳ ನೆನಪಿಸಿಕೊಳ್ಳುತ್ತಿದ್ದರು. ಅಮ್ಮ ನನ್ನ ಪಕ್ಕ ಕೂತಿದ್ದಾಳೆ, ನನ್ನನ್ನು ಕರೆದುಕೊಂಡು ಹೋಗುವುದಕ್ಕೆ ಬಂದಿದ್ದಾಳೆ ಎಂದು ಹೇಳುತ್ತಿದ್ದರು’ ಎಂದು ಸುತಾಪಾ ಸಿಖ್ದರ್ ಹೇಳಿದ್ದಾರೆ.

ಇರ್ಫಾನ್​ ಮತ್ತು ಅವರ ತಾಯಿಯ ಸಾವಿನ ಅಂತ ಕೇವಲ ನಾಲ್ಕು ದಿನಗಳು ಮಾತ್ರ. ರ್ಇಾನ್ ಅವರ ತಾಯಿ ಸಯಿದಾ ಬೇಗಮ್, ಶನಿವಾರ ವಯೋಸಹಜ ಸಮಸ್ಯೆಗಳಿಂದ ರಾಜಸ್ತಾನದಲ್ಲಿ ನಿಧನರಾಗಿದ್ದರು. ಮುಂಬೈನಲ್ಲಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಇರ್ಫಾನ್​, ತಮ್ಮ ತಾಯಿಯ ಅಂತ್ಯಸಂಸ್ಕಾರದಲ್ಲಿ ಭಾಗವಹಿಸುವುದಕ್ಕೆ ಸಾಧ್ಯವಾಗಲೇ ಇಲ್ಲ. ಅದಾಗಿ ನಾಲ್ಕನೇ ದಿನಕ್ಕೆ ಇರ್ಫಾನ್​ ಖಾನ್ ಇನ್ನಿಲ್ಲವಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net