ಇರ್ಫಾನ್​ ಸ್ಮೈಲ್ ನನಗೆ ಬಹಳ ಇಷ್ಟ ... ಅಗಲಿದ ಮಿತ್ರನ ಬಗ್ಗೆ ಮೆಚ್ಚುಗೆಯ ಮಾತಾಡಿದ ಆ್ಯಂಜಲೀನಾ ಜೋಲಿ

Angelina Jolie Final
Published on

ಬುಧವಾರವಷ್ಟೇ ನಿಧನರಾದ ಬಾಲಿವುಡ್‌ನ ಖ್ಯಾತ ನಟ ರ್ಇಾನ್ ಖಾನ್ ಸಾವಿನ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. ಈಗ ಹಾಲಿವುಡ್‌ನ ಖ್ಯಾತ ನಟಿ ಆ್ಯಂಜಲೀನಾ ಜೋಲಿ ಸಹ ಇರ್ಫಾನ್​ ಖಾನ್ ನಿಧನದ ಬಗ್ಗೆ ಸಂತಾಪ ಸೂಚಿಸಿದ್ದಾರೆ.

ಇಷ್ಟಕ್ಕೂ ಆ್ಯಂಜಲೀನಾ ಜೋಲಿ ಅವರಿಗೆ ಇರ್ಫಾನ್​ ಖಾನ್ ಹೇಗೆ ಪರಿಚಯ ಎಂಬ ಸಣ್ಣ ಪ್ರಶ್ನೆ ಬರಬಹುದು. ವಿಷಯ ಏನೆಂದರೆ, ಜೋಲಿ ಮತ್ತು ಖಾನ್ ಇಬ್ಬರೂ 2007ರಲ್ಲಿ ಬಿಡುಗಡೆಯಾದ ‘ಎ ಮೈಟಿ ಹಾರ್ಟ್’ ಎಂಬ ಚಿತ್ರದಲ್ಲಿ ಜತೆಯಾಗಿ ನಟಿಸಿದ್ದರು. ಆ ಸಂದರ್ಭದಲ್ಲಿ ಇರ್ಫಾನ್​ ಖಾನ್ ಜತೆಗೆ ಗೆಳೆತನ ಹೊಂದಿದ್ದ ಜೋಲಿ, ತಮ್ಮ ಮಿತ್ರನ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

‘‘ಮೈಟಿ ಹಾರ್ಟ್’ ಚಿತ್ರದಲ್ಲಿ ಇರ್ಫಾನ್​ ಜತೆಗೆ ನಟಿಸುವ ಅವಕಾಶವೊಂದು ನನಗೆ ಸಿಕ್ಕಿತ್ತು. ಅವರೊಬ್ಬ ಅದ್ಭುತ ನಟ. ಅವರ ಜತೆಗೆ ನಟಿಸುವುದೇ ಒಂದು ಅದ್ಭುತ ಅನುಭವವಾಗಿತ್ತು. ಅವರಲ್ಲಿ ನನಗೆ ಬಹಳ ಇಷ್ಟವಾಗಿದ್ದು ಕೆಲಸದೆಡಗಿನ ಅವರ ಕಮಿಟ್‌ಮೆಂಟ್ ಮತ್ತು ಅವರ ಸ್ಮೈಲ್. ಅವರ ನಿಧನದ ನೋವು ಸಹಿಸಿಕೊಳ್ಳಲು ಆ ದೇವರು ಶಕ್ತಿ ನೀಡಿಲಿ’ ಎಂದು ಆ್ಯಂಜಲೀನಾ ಜೋಲಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net