

ಬುಧವಾರ ನಿಧನರಾದ ಬಾಲಿವುಡ್ನ ಖ್ಯಾತ ನಟ ಇರ್ಫಾನ್ ಖಾನ್ಗೆ ಕನ್ನಡ ಚಿತ್ರರಂಗದ ಅಥವಾ ಕರ್ನಾಟಕದ ನಂಟು ಅಷ್ಟೇನೂ ಇರಲಿಲ್ಲ. ಅವರು ಕರ್ನಾಟಕದಲ್ಲಿ ಕಾಣಿಸಿಕೊಂಡಿದ್ದು ಸಹ ಬಹಳ ಕಡಿಮೆಯೇ. ಆದರೆ, ನಾಲ್ಕು ವರ್ಷಗಳ ಹಿಂದೆ, ಇರ್ಫಾನ್ ಮೈಸೂರಿಗೆ ಬಂದಿದರು ಎಂಬ ವಿಷಯ ನಿಮಗೆ ನೆನಪಿದೆಯಾ?
ಇಲ್ಲಿದಿದ್ದರೆ ಇಲ್ಲಿ ಕೇಳಿ. 2016ರಲ್ಲಿ ಇರ್ಫಾನ್ ಮೈಸೂರಿಗೆ ಬಂದಿದ್ದರು. ಅದಕ್ಕೆ ಕಾರಣ ರಂಗಭೂಮಿಯ ನಂಟು. ಚಿತ್ರರಂಗಕ್ಕೆ ಬರುವುದಕ್ಕಿಂತ ಮುನ್ನ ರಂಗಭೂಮಿಯಲ್ಲಿ ದೊಡ್ಡ ಹೆಸರು ಮಾಡಿದ್ದ ಇರ್ಫಾನ್, ಆ ನಂತರ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದರೂ, ರಂಗಭೂಮಿಯ ನಂಟನ್ನು ಸಂಪೂರ್ಣವಾಗಿ ಬಿಟ್ಟಿರಲಿಲ್ಲ. ಆ ರಂಗಭೂಮಿಯ ನಂಟೇ ಅವರನ್ನು ಮೈಸೂರಿನವರೆಗೂ ಕರೆದುಕೊಂಡು ಬಂದಿದ್ದು ಎಂಬುದು ವಿಶೇಷ.
ರಂಗಾಯಣದ ವತಿಯಿಂದ ಪ್ರತಿ ವರ್ಷ ನಡೆಯುವ ಬಹುರೂಪಿ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮೈಸೂರಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಹಲವು ಪ್ರಸಕ್ತ ವಿದ್ಯಮಾನಗಳ ಕುರಿತಾಗಿ ಇರ್ಫಾನ್ ಖಾನ್ ಮಾತನಾಡಿದ್ದರು.