ಗೌರಿ ಲಂಕೇಶ್​ಗೆ ಅಂತಾರಾಷ್ಟ್ರೀಯ ಮನ್ನಣೆ..

Gauri Lankesh
Published on

ಬೆಂಗಳೂರು: ಕವಿತಾ ಲಂಕೇಶ್ ನಿರ್ದೇಶನದ ಚಿತ್ರವೊಂದಕ್ಕೆ ಸದ್ದಿಲ್ಲದೆ ಪ್ರಶಸ್ತಿ ಬಂದಿದೆ. ಕೆಲವು ವರ್ಷಗಳಿಂದೀಚೆಗೆ ಕವಿತಾ ಲಂಕೇಶ್ ಯಾವೊಂದು ಚಿತ್ರ ಮಾಡಿದ ಸುದ್ದಿಯಾಗಿರಲಿಲ್ಲ. ಹಾಗಿರುವಾಗ ಯಾವ ಚಿತ್ರ ಮತ್ತು ಯಾವ ಪ್ರಶಸ್ತಿ ಎಂಬ ಪ್ರಶ್ನೆ ಬರುವುದು ಸಹಜ. ಕವಿತಾ ಅವರು ಇತ್ತೀಚೆಗೆ ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ಸಹೋದರಿ ದಿವಂಗತ ಗೌರಿ ಲಂಕೇಶ್ ಕುರಿತು ‘ಗೌರಿ’ ಎಂಬ ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದ್ದರು. ಈ ಚಿತ್ರವು ಕೆಲವು ವರ್ಷಗಳ ಹಿಂದೆ ನಿಧನರಾದ ಗೌರಿ ಲಂಕೇಶ್ ಅವರ ಹೋರಾಟ ಮತ್ತು ಸಾವಿನ ಕುರಿತದ್ದಾಗಿದೆ. ಈ ಚಿತ್ರಕ್ಕೆ 2022ನೇ ಸಾಲಿನ ಟೊರೊಂಟೊ ಮಹಿಳಾ ಚಿತ್ರೋತ್ಸವದಲ್ಲಿ ಅತ್ಯುತ್ತಮ ಮಾನವ ಹಕ್ಕುಗಳ ಪ್ರಶಸ್ತಿ ಬಂದಿದೆ.

ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ 200ಕ್ಕೂ ಹೆಚ್ಚು ಪತ್ರಕರ್ತರ ಮೇಲೆ ದಾಳಿಗಳಾದ ವರದಿಯಾಗಿವೆ. 30ಕ್ಕೂ ಹೆಚ್ಚು ಪತ್ರಕರ್ತರನ್ನು ಹತ್ಯೆ ಮಾಡಲಾಗಿದೆ. ಈ ಸಾಕ್ಷ್ಯಚಿತ್ರವು ಭಾರತದಲ್ಲಿ ಪತ್ರಕರ್ತರು ದಿನನಿತ್ಯ ಎದುರಿಸುತ್ತಿರುವ ಮೌಖಿಕ ಮತ್ತು ದೈಹಿಕ ದಾಳಿಗಳನ್ನು ತೆರೆದಿಡುತ್ತದೆ.

ಆಮ್್ಟರ್​ಡ್ಯಾಮ್ ಫ್ರೀ ಪ್ರೆಸ್ ಅನ್​ಲಿಮಿಟೆಡ್ ಈ ಸಾಕ್ಷ್ಯಚಿತ್ರವನ್ನು ನಿರ್ವಿುಸಿದೆ. ಟೊರೊಂಟೊ ಮಹಿಳಾ ಚಿತ್ರೋತ್ಸವ ಅಷ್ಟೇ ಅಲ್ಲದೇ, ಈ ಸಾಕ್ಷ್ಯಚಿತ್ರವು ಮಾಂಟ್ರಿಯಲ್​ನ ದಕ್ಷಿಣ ಏಷ್ಯಾ ಚಿತ್ರೋತ್ಸವಕ್ಕೂ ಆಯ್ಕೆಯಾಗಿದೆ. ಅಲ್ಲದೆ, ಆಮ್್ಟರ್​ಡ್ಯಾಮ್ ಅಂತಾರಾಷ್ಟ್ರೀಯ ಸಾಕ್ಷ್ಯಚಿತ್ರೋತ್ಸವ, ಸನ್​ಡಾನ್ಸ್ ಚಿತ್ರೋತ್ಸವ ಮತ್ತು ಇತರೆ ಚಿತ್ರೋತ್ಸವಗಳಿಗೂ ಪರಿಗಣಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net