ಏ. 1ರಂದು ತೆರೆ ಮೇಲೆ ಇನ್​ಸ್ಟಂಟ್ ಕರ್ಮ

Karma
Published on

ಬೆಂಗಳೂರು: ಇಲ್ಲಿ ಮಾಡಿದ ಕರ್ಮಕ್ಕೆ ಇಲ್ಲಿಯೇ ಪ್ರತಿಫಲ ಅನುಭವಿಸಬೇಕು ಎಂಬ ಮಾತಿದೆ. ಆ ಮಾತನ್ನೇ ಸಿನಿಮಾ ಮಾಡಿದೆ ಹೊಸ ಉತ್ಸಾಹಿ ತಂಡ. ಸದ್ದಿಲ್ಲದೆ, ಆ ಚಿತ್ರದ ಬಿಡುಗಡೆಯೂ ದೂರವೇನಿಲ್ಲ. ಏ.1ರಂದೇ ‘ಇನ್​ಸ್ಟಂಟ್ ಕರ್ಮ’ ಸಿನಿಮಾ ತೆರೆಗೆ ಬರಲಿದೆ. ಸಂದೀಪ್ ಮಹಾಂತೇಶ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ಇನ್​ಸ್ಟಂಟ್ ಕರ್ಮ’ ನೈಜ ಘಟನೆ ಆಧರಿತ ಸಿನಿಮಾ.

ಕಣ್ಣಾರೆ ಕಂಡ ಕೆಲ ಘಟನಾವಳಿಗಳೇ ಈ ಸಿನಿಮಾ ಮಾಡಲು ಅವರಿಗೆ ಪ್ರೇರೇಪಣೆ ನೀಡಿತಂತೆ. ‘ನನ್ನ ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆ. ಅಲ್ಲಿ ನಡೆದ ಘಟನೆಯೇ ಈ ಸಿನಿಮಾಕ್ಕೆ ಸ್ಪೂರ್ತಿ. ಇದೀಗ ಕಲಾವಿದರು ಮತ್ತು ತಂತ್ರಜ್ಞರ ಸಹಕಾರದಿಂದ ಸಿನಿಮಾ ಸಿದ್ಧವಾಗಿದೆ. ಇದೇ ಶುಕ್ರವಾರ ತೆರೆಗೆ ಬರಲಿದೆ.

ಹೊಸ ತಂಡವನ್ನು ಪ್ರೋತ್ಸಾಹಿಸಿ’ ಎಂದರು. ನಿರ್ದೇಶಕರೇ ನಿರ್ವಿುಸಿರುವ ಈ ಚಿತ್ರದಲ್ಲಿ ಯಶ್ ಶೆಟ್ಟಿ, ಕೆಂಡ ಶ್ರೇಷ್ಠ, ಅಂಜನ್ ದೇವ್, ಪ್ರಜ್ವಲ್ ಶೆಟ್ಟಿ, ಹರಿ ಧನಂಜಯ್ ಪ್ರಮುಖ ಪಾತ್ರದಲ್ಲಿದ್ದಾರೆ. ಸೂರಜ್ ಸಂಗೀತ ನಿರ್ದೇಶನ, ಭಾಸ್ಕರ್ ಹೆಗಡೆ ಛಾಯಾಗ್ರಹಣ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net