

ಪ್ರಿಯಾಂಕಾ ಚೋಪ್ರಾ ಕಳೆದ ಕೆಲವು ದಿನಗಳಿಂದ ಇಂಗ್ಲೀಷ್ ವೆಬ್ಸಿರೀಸ್ ‘ಸಿಟಾಡೆಲ್’ನ ಸಾಹಸ ದೃಶ್ಯಗಳ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ. ಶನಿವಾರ ಫೈಟ್ ಮಾಡುವ ಭರದಲ್ಲಿ ಅವರಿಗೆ ಜೋರಾಗಿ ಪೆಟ್ಟಾಗಿದ್ದು, ಬಲಹುಬ್ಬು ಕಟ್ ಆಗಿ ರಕ್ತ ಸುರಿದಿದೆ. ಶನಿವಾರ ತಮ್ಮ ರಕ್ತಸಿಕ್ತ ಮುಖದ ಫೋಟೋ ಶೇರ್ ಮಾಡಿರುವ ಅವರು, ಇದರಲ್ಲಿ ಯಾವುದು ನಿಜ ಎಂಬ ಪ್ರಶ್ನೆಯನ್ನು ಅಭಿಮಾನಿಗಳಿಗೆ ಕೇಳಿದ್ದಾರೆ. ಆ ಪೈಕಿ, ಕೆನ್ನೆಯ ಮೇಲೊಂದು ಕಟ್ ಇದ್ದರೆ, ಹುಬ್ಬಿನ ಮೇಲೆ ಇನ್ನೊಂದು ಕಟ್ ಆಗಿದೆ. ಇದಕ್ಕೆ ಅವರ ಹಲವು ಅಭಿಮಾನಿಗಳು ಉತ್ತರಗಳನ್ನು ನೀಡಿದ್ದು, ಕೊನೆಗೆ ಪ್ರಿಯಾಂಕಾ ಇನ್ನೊಂದು ಫೋಟೋ ಹಂಚಿಕೊಂಡು ಅದರಲ್ಲಿ ಉತ್ತರಿಸಿದ್ದಾರೆ.
ಹುಬ್ಬಿನ ಮೇಲೆ ಆಗಿರುವುದು ನಿಜವಾದ ಗಾಯ, ಕೆನ್ನೆಯ ಮೇಲೆ ಆಗಿರುವುದು ಫೇಕ್ ಗಾಯ ಎಂದು ಸ್ಪಷ್ಟಪಡಿಸಿದ್ದಾರೆ. ಅಂದಹಾಗೆ, ರಸ್ಸೋ ಬ್ರದರ್ಸ್ ನಿರ್ದೇಶಿಸುತ್ತಿರುವ ಈ ವೆಬ್ಸರಣಿಯು ಮುಂದಿನ ವರ್ಷ ಅಮೆಜಾನ್ ಪ್ರೖೆಮ್ಲ್ಲಿ ಬಿಡುಗಡೆಯಾಗಲಿದೆ. ಈ ಸರಣಿಯಲ್ಲಿ ಪ್ರಿಯಾಂಕಾ ಸ್ಪೈ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. -ಏಜೆನ್ಸೀಸ್