ಈ ಮೂಲಕ ವಿದೇಶದಲ್ಲಿಯೂ 'ಕೆಜಿಎಫ್: 2' ದಾಖಲೆಗಳನ್ನು ಬರೆಯುತ್ತಿದೆ. ಸದ್ಯ, ಉತ್ತರ ಭಾರತದ, ತಮಿಳುನಾಡಿನ, ಕೇರಳದ ಅಭಿಮಾನಿಗಳಿಗೆ ಟಿಕೆಟ್ ಆರಂಭವಾಗಿದ್ದು, ಸಿನಿಮಾ ಉತ್ತರ ಭಾರತದಲ್ಲಿಯೂ ದಾಖಲೆ ಬರೆದಿದೆ. ಹೌದು, ಟಿಕೆಟ್ ಬುಕ್ಕಿಂಗ್ ಆರಂಭವಾದ ಕೇವಲ 12 ಗಂಟೆಗಳಲ್ಲಿ 1 ಲಕ್ಷಕ್ಕೂ ಅಧಿಕ ಟಿಕೆಟ್ಗಳು ಸೋಲ್ಡ್ಔಟ್ ಆಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಅಂದರೆ, ಕೇವಲ 12 ಗಂಟೆಗಳಲ್ಲಿ ಸಿನಿಮಾ ಬರೋಬ್ಬರಿ 3.35 ಕೋಟಿ ರೂಪಾಯಿ ಪ್ರೀ-ಬಿಸ್ನೆಸ್ ಮಾಡಿದೆಯಂತೆ. ‘ಹೌದು, 'ಕೆಜಿಎಫ್: 2' ಚಿತ್ರಕ್ಕೆ ಉತ್ತರ ಭಾರತದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇದೆ. ಇದಕ್ಕೆ ಉದಾಹರಣೆ ಎಂದರೆ ರಿಲೀಸ್ ಆದ ಕೇವಲ 24 ಗಂಟೆಗಳಲ್ಲಿ 'ಕೆಜಿಎಫ್: ಚಾಪ್ಟರ್ 2' ಚಿತ್ರದ ಹಿಂದಿ ಟ್ರೈಲರ್ ಬರೋಬ್ಬರಿ 5 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಪಡೆದಿರುವುದು.