Bigg Boss Kannada 8: ರಾಜೀವ್​ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಎಲಿಮಿನೇಟ್ ಸ್ಪರ್ಧಿ ಗೀತಾ ಭಟ್!​

Rajiv 1
Published on

ಬೆಂಗಳೂರು: ಬಿಗ್​ಬಾಸ್​ ಮನೆಯಿಂದ ಮೂರನೇ ವಾರ ಎಲಿಮಿನೇಟ್​ ಆಗಿರುವ ಕಿರುತೆರೆ ನಟಿ ಗೀತಾ ಭಟ್​ ಸಹ ಸ್ಪರ್ಧಿಗಳಾದ ರಾಜೀವ್ ಮತ್ತು ಶಮಂತ್​ (ಬ್ರೋ ಗೌಡ) ಬಗ್ಗೆ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.

ರಾಜೀವ್​ ಚತುರ ಆಟಗಾರ

ನನ್ನ ಪ್ರಕಾರ ರಾಜೀವ್​ ಬಹಳ ಬುದ್ಧಿವಂತೆ ಆಟವಾಡುತ್ತಿದ್ದಾರೆ. ಆಕ್ರಮಣಕಾರಿ ವ್ಯಕ್ತಿತ್ವವನ್ನು ಹೊರತುಪಡಿಸಿದರೆ, ರಾಜೀವ್​ ಒಳ್ಳೆಯ ವ್ಯಕ್ತಿ. ಅವರು ಎಲ್ಲರೊಂದಿಗೆ ಬೆರೆಯುತ್ತಾರೆ. ಆದರೆ, ಮನೆಯೊಳಗೆ ಆಟಕ್ಕಾಗಿ ತನ್ನ ವ್ಯಕ್ತಿತ್ವವನ್ನು ಬದಲಾಯಿಸಿಕೊಂಡಿರುವಂತೆ ಕಾಣುತ್ತಾರೆಂದು ಹೇಳಿದ್ದಾರೆ.

ನನ್ನ ಬದಲು ಶಮಂತ್​ ಹೋಗಬೇಕಿತ್ತು

ಇಂದು ನನ್ನ ಬದಲು ಶಮಂತ್​ ಅವರು ಹೊರಹೋಗಬೇಕಿತ್ತೆಂದು ನಾನು ಭಾವಿಸುತ್ತೇನೆ. ನಾನು ಈ ವಾರವೇ ಹೊರಹೋಗುತ್ತೇನೆಂದು ಭಾವಿಸಿರಲಿಲ್ಲ. ಜನರೊಂದಿಗೆ ಬೆರೆಯವುದರಲ್ಲಿ ಮತ್ತು ಪ್ರದರ್ಶನದಲ್ಲಿ ಶಮಂತ್​ ತುಂಬಾ ದರ್ಬಲರಾಗಿದ್ದಾರೆ. ಸ್ಪರ್ಧಿಗಳಿಗಿಂತ ಕ್ಯಾಮೆರಾ ಮುಂದೆಯೇ ಹೆಚ್ಚು ಮಾತನಾಡುತ್ತಾರೆ. ಅವರು ಹೊರಬರಬೇಕಿತ್ತು. ಆದರೆ, ಅವರು ಮತ್ತೊಂದು ಅವಕಾಶ ಪಡೆದುಕೊಂಡಿದ್ದಾರೆ. ಹೀಗಾಗಿ ಅವರಿಗೆ ಆಲ್​ ದಿ ಬೆಸ್ಟ್​ ಹೇಳುತ್ತೇನೆಂದರು.

ನಿಧಿ ಸುಬ್ಬಯ್ಯ, ವಿಶ್ವನಾಥ್​ ಹಾವೇರಿ, ಶಮಂತ್​ (ಬ್ರೋ ಗೌಡ), ದಿವ್ಯಾ ಸುರೇಶ್​, ದಿವ್ಯಾ ಉರುಡುಗ, ಅರವಿಂದ್​ ಕೆ.ಪಿ. ಮತ್ತು ಪ್ರಶಾಂತ್​ ಸಂಬರಗಿ ಜತೆ ಗೀತಾ ಸಹ ನಾಮಿನೇಟ್​ ಆಗಿದ್ದರು. ಆದರೆ, ಅತಿ ಕಡಿಮೆ ವೋಟ್​ ಪಡೆದು ಮನೆಯಿಂದ ಹೊರಬಂದಿದ್ದಾರೆ. ಗೀತಾ ಬಿಗ್​ಬಾಸ್​ ಮನೆಯಲ್ಲಿ ಒಟ್ಟು 22 ದಿನಗಳನ್ನು ಕಳೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net