

Rukmini Vasanth : ಕಾಂತಾರ ಚಾಪ್ಟರ್-1 ಬಿಡುಗಡೆಯಾದ ಬಳಿಕ ರುಕ್ಮಿಣಿ ವಸಂತ್ ಅವರ ಹೆಸರು ಪ್ಯಾನ್ ಇಂಡಿಯಾ ರೇಂಜ್‌ನಲ್ಲಿ ಟ್ರೆಂಡಿಂಗ್ ಆಗಿದೆ. ಅದಕ್ಕೆ ಮುಖ್ಯ ಕಾರಣ ಅವರ ಸೌಂದರ್ಯ ಮಾತ್ರವಲ್ಲ, ನಟನೆ ಮತ್ತು ಅಭಿನಯದ ಮೂಲಕವೂ ಪ್ರೇಕ್ಷಕರನ್ನು ಮೆಚ್ಚಿಸಿದ್ದಾರೆ. ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್ ನಾಯಕಿಯಾಗಿ ರುಕ್ಕು ಗುರುತಿಸಿಕೊಂಡಿದ್ದಾರೆ.
ಇನ್ನು ಕಾಂತಾರ ಚಿತ್ರವನ್ನು ನೋಡಿದ ಪ್ರತಿಯೊಬ್ಬರೂ ರುಕ್ಮಿಣಿ ಅವರನ್ನು ನ್ಯಾಷನಲ್ ಕ್ರಶ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅಂದಹಾಗೆ, ಈ ಮಾತನ್ನು ಈ ಮೊದಲು ರಶ್ಮಿಕಾ ಅವರಿಗೆ ಹೇಳಲಾಗುತ್ತಿತ್ತು. ಪುಷ್ಪ ಚಿತ್ರದ ನಂತರ ರಶ್ಮಿಕಾ ಮಂದಣ್ಣ ಅವರಿಗೆ ಸಿಕ್ಕ ಮನ್ನಣೆ ಇದೀಗ ಕಾಂತಾರ ಬಳಿಕ ರುಕ್ಮಿಣಿ ಅವರಿಗೂ ಸಿಗಲಿದೆ. ಗಮನಾರ್ಹ ಸಂಗತಿ ಏನೆಂದರೆ, ಇಬ್ಬರೂ ಕನ್ನಡದವರೇ. ಎಲ್ಲರು ನ್ಯಾಷನಲ್ ಕ್ರಶ್ ಎಂದು ಕರೆಯುತ್ತಿರುವುದರ ಬಗ್ಗೆ ರುಕ್ಮಿಣಿ ವಸಂತ್ ಪ್ರತಿಕ್ರಿಯೆ ನೀಡಿದ್ದಾರೆ.
ಇತ್ತೀಚೆಗೆ ಶಿವಕಾರ್ತಿಕೇಯನ್ ಜತೆ 'ಮದರಾಸಿ' ಚಿತ್ರದಲ್ಲಿ ನಟಿಸಿ, ತಮ್ಮ ನಟನೆಯ ಮೂಲಕ ಎಲ್ಲರ ಮೇಲೆ ಪ್ರಭಾವ ಬೀರಿರುವ ರುಕ್ಮಿಣಿ, 'ಕಾಂತಾರ ಚಾಪ್ಟರ್-1' ಮೂಲಕ ಪ್ಯಾನ್ ಇಂಡಿಯಾ ಪ್ರೇಕ್ಷಕರಿಗೆ ಹತ್ತಿರವಾಗುತ್ತಿದ್ದಾರೆ. ಪ್ರಸ್ತುತ, ಅವರ ಕೈಯಲ್ಲಿ ಯಶ್ ನಟನೆಯ ಟಾಕ್ಸಿಕ್ ಮತ್ತು ಜೂ. ಎನ್ಟಿಆರ್ ನಟನೆ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರಗಳಿವೆ. ಇವೆರಡೂ ಪ್ಯಾನ್ ಇಂಡಿಯಾ ಚಿತ್ರಗಳು. ಇದರಲ್ಲಿಯೂ ರುಕ್ಮಿಣಿ ಅವರ ಪಾತ್ರ ಗಮನ ಸೆಳೆಯಲಿದೆ ಎಂಬ ನಿರೀಕ್ಷೆ ಎಲ್ಲರಲ್ಲೂ ಇದೆ.
ಕಳೆದ ಕೆಲವು ದಿನಗಳಿಂದ, ಅನೇಕ ಜನರು ನ್ಯಾಷನಲ್ ಕ್ರಶ್ ಎಂದು ಹೇಳುತ್ತಿದ್ದಾರೆ. ಇದು ನನಗೂ ತಲುಪಿದೆ. ಅಂತಹ ವಿಷಯಗಳು ಕೇಳಲು ತುಂಬಾ ಸಂತೋಷವನ್ನು ನೀಡುತ್ತವೆ. ಆದರೆ, ನಾನು ಅಂತಹ ಹೊಗಳಿಕೆಯ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ಅಂತಹ ವಿಷಯಗಳು ಏನೇ ಇರಲಿ, ಅವು ತಾತ್ಕಾಲಿಕ. ಕಾಲಾನಂತರದಲ್ಲಿ, ಅನೇಕ ಜನರು ಬರುತ್ತಾರೆ ಮತ್ತು ಅವು ಸಹ ಬದಲಾಗುತ್ತವೆ ಎಂದು ನಾನು ನಂಬುತ್ತೇನೆ. ಆದರೆ, ನಾನು ಪ್ರೇಕ್ಷಕರಿಗೆ ಹತ್ತಿರವಾಗಲು ಬಯಸುತ್ತೇನೆ ಎಂದು ಪ್ರಬುದ್ಧತೆಯ ಮಾತುಗಳನ್ನು ಆಡಿದ್ದಾರೆ. ರುಕ್ಕು ಅವರ ಈ ಮಾತುಗಳನ್ನು ಕೇಳಿದ ಅಭಿಮಾನಿಗಳು ಇದಪ್ಪಾ ಮಾತೆಂದರೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಸಪ್ತ ಸಾಗರದಾಚೆ ಎಲ್ಲೋ ಚಿತ್ರದೊಂದಿಗೆ ಅನೇಕ ಜನರು ನನ್ನನ್ನು ಪ್ರಿಯಾ ಎಂದು ಕರೆಯುತ್ತಾರೆ. ನಾನು ಈ ರೀತಿ ಪ್ರೇಕ್ಷಕರನ್ನು ತಲುಪಲು ಸಾಧ್ಯವಾದರೆ ನನಗೆ ತುಂಬಾ ಸಂತೋಷವಾಗುತ್ತದೆ ಎಂದು ರುಕ್ಮಿಣಿ ವಸಂತ್ ಅವರು ಹೇಳಿದರು. (ಏಜೆನ್ಸೀಸ್)