

ಬೆಂಗಳೂರು: ‘ಕೇವಲ ಒಂದೂವರೆ ಸಾವಿರ ರೂಪಾಯಿಗಳಲ್ಲಿ ಪ್ರಾರಂಭವಾದ ಚಿತ್ರವಿದು ...’ ಹಾಗೆಂದು ಹೇಳಿದ್ದು ‘ಹುಲಿಬೇಟೆ’ ಚಿತ್ರದ ನಾಯಕ ವಿಶ್ವ. ಕಷ್ಟದಿಂದಲೇ ಪ್ರಾರಂಭವಾದ ಈ ಚಿತ್ರ, ಇದೀಗ ಮುಗಿದಿದೆ. ಎಲ್ಲ ಅಂದುಕೊಂಡಂತೆ ಆದರೆ, ಮೇ ತಿಂಗಳ ಕೊನೆಗೆ ಚಿತ್ರ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
‘ಹುಲಿಬೇಟೆ’ ಕುರಿತು ಮಾತನಾಡುವ ಅವರು, ‘ಕ್ಯಾಮೆರಾ ಸಹಾಯಕನಾಗಿದ್ದ ನನಗೆ ಅಭಿನಯದಲ್ಲಿ ಆಸಕ್ತಿ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ತಂದೆ-ತಾಯಿಯ ಬೆಂಬಲದಿಂದ ಚಿತ್ರ ಪ್ರಾರಂಭ ವಾಯಿತು. ಚಿತ್ರ ಅರ್ಧ ಮುಗಿಯುತ್ತಿದ್ದಂತೆಯೇ ತಂದೆ ತೀರಿಕೊಂಡರು. ತಾಯಿ ಬೆಂಬಲದಿಂದ ಚಿತ್ರ ಪೂರ್ಣವಾಗಿದೆ. ಮೇ ಅಂತ್ಯಕ್ಕೆ ಬಿಡುಗಡೆಯಾಗಲಿದೆ’ ಎನ್ನುತ್ತಾರೆ ವಿಶ್ವ.
ರಾಜ್ ಬಹದ್ದೂರ್ ನಿರ್ದೇಶನದ ಈ ಚಿತ್ರವು ಭೂಗತಲೋಕದ ಸುತ್ತ ಸುತ್ತುತ್ತದಂತೆ. ಅಲ್ಲೊಂದು ನವಿರಾದ ಪ್ರೇಮಕಥೆಯೂ ಇದೆಯಂತೆ. ವಿಶ್ವ ಅವರಿಗೆ ನಾಯಕಿಯಾಗಿ ರೋಹಿಣಿ ಕುಲಕರ್ಣಿ ನಟಿಸಿದ್ದು, ಮಿಕ್ಕಂತೆ ಮಾಸ್ಟರ್ ಆನಂದ್, ಹೇಮಾ ಗೌಡ, ಅಶೋಕ್ ಕಾಂಬ್ಳೆ ಮುಂತಾದವರು ನಟಿಸಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತ ಮತ್ತು ಧನಪಾಲ್ ಛಾಯಾಗ್ರಹಣವಿರುವ ಈ ಚಿತ್ರವನ್ನು ಧಾನುಬಾಯ್ ಸಿನಿಮಾಸ್ನಡಿ ವಿಶ್ವನಾಥ ಚೌಹಾಣ್ ನಿರ್ವಿುಸಿದ್ದಾರೆ.