ಆಕೆ ಬಗ್ಗೆ ತಪ್ಪು ತಿಳ್ಕೊಂಡು ಬಿಟ್ಟಿದ್ದೆ ... ಐಶ್ವರ್ಯಾ ಬಗ್ಗೆ ಹೃತಿಕ್ ಹಾಗೆ ಹೇಳಿದ್ದು ಯಾಕೆ?

Hrithik - Aishwarya Final
Published on

ಬಾಲಿವುಡ್‌ನ ಜನಪ್ರಿಯ ಜೋಡಿಗಳಲ್ಲಿ ಹೃತಿಕ್ ರೋಶನ್ ಮತ್ತು ಐಶ್ವರ್ಯಾ ರೈ ಜೋಡಿ ಸಹ ಒಂದು. ಇವರಿಬ್ಬರೂ ‘ಧೂಮ್ 2’, ‘ಗುಜಾರಿಶ್’ ಮತ್ತು ‘ಜೋಧಾ ಅಕ್ಬರ್’ ಚಿತ್ರಗಳಲ್ಲಿ ನಟಿಸಿ, ಎಲ್ಲರ ಮನ ಗೆದ್ದಿರುವುದು ಗೊತ್ತೇ ಇದೆ.

ಆದರೆ, ಐಶ್ವರ್ಯಾ ಜತೆಗೆ ನಟಿಸುವುದಕ್ಕಿಂತ ಮುನ್ನ ಹೃತಿಕ್ ರೋಶನ್‌ಗೆ ಆಕೆಯ ಬಗ್ಗೆ ತಪ್ಪು ತಿಳವಳಿಕೆ ಇದ್ದ ವಿಷಯ ಗೊತ್ತಾ? ಈ ವಿಷಯವನ್ನು ಸ್ವತಃ ಹೃತಿಕ್ ರೋಶನ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಐಶ್ವರ್ಯ ಜತೆಗೆ ನಟಿಸುವುದಕ್ಕಿಂತ ಮುನ್ನ ಆಕೆಯ ಬಗ್ಗೆ ಸಾಕಷ್ಟು ತಪ್ಪು ತಿಳಿದುಕೊಂಡಿದ್ದೆ ಎಂದು ಹೇಳಿದ್ದಾರೆ. ಇಷ್ಟಕ್ಕೂ ಐಶ್ವರ್ಯಾ ಬಗ್ಗೆ ಹೃತಿಕ್‌ಗಿದ್ದ ತಪ್ಪು ತಿಳವಳಿಕೆ ಏನು?

‘ನನಗೆ ನಿಜಕ್ಕೂ ಐಶ್ವರ್ಯಾ ಅಷ್ಟೊಂದು ಚೆನ್ನಾಗಿ ನಟಿಸುತ್ತಾರೆ ಎಂದು ಅವರ ಜತೆಗೆ ನಟಿಸುವುದಕ್ಕಿಂತ ಮುಂಚೆ ಗೊತ್ತಿರಲಿಲ್ಲ. ನೋಡೋಕೇನೋ ಚೆನ್ನಾಗಿದ್ದಾರೆ, ಅಭಿನಯದಲ್ಲಿ ಹೇಗೋ ಎಂಬ ಪ್ರಶ್ನೆ ಇದ್ದೇ ಇತ್ತು. ಒಮ್ಮೆ ಅವರ ಜತೆಗೆ ನಟಿಸುವುದಕ್ಕೆ ಶುರು ಮಾಡಿದ ಮೇಲೆ, ಅವರೆಂತಹ ಪ್ರತಿಭಾವಂತೆ ಎಂದು ನನಗೆ ಅರ್ಥವಾಗುತ್ತಾ ಹೋಯಿತು’ ಎಂದು ಹೇಳಿಕೊಂಡಿದ್ದಾರೆ ಹೃತಿಕ್.

ಅಷ್ಟೇ ಅಲ್ಲ, ಐಶ್ವರ್ಯಾ ಬಗ್ಗೆ ತಪ್ಪು ತಿಳಿದುಕೊಂಡಿದ್ದಿಕ್ಕೆ, ಹೃತಿಕ್‌ಗೆ ನಾಚಿಕೆಯಾಯಿತಂತೆ. ‘ನಿಜ ಹೇಳಬೇಕೆಂದರೆ, ಐಶ್ವರ್ಯಾ ಬಗ್ಗೆ ತಪ್ಪು ತಿಳಿದಿದ್ದಕ್ಕೆ, ನನಗೆ ನಾಚಿಕೆಯಾಯಿತು. ಕೆಲವೊಮ್ಮೆ ಸೌಂದರ್ಯ ಎನ್ನುವುದು ಪ್ರತಿಭೆಯನ್ನು ಮರೆಮಾಚಿ ಬಿಡುತ್ತದೆ. ಐಶ್ವರ್ಯಾ ಸಹ ಅಷ್ಟೇ. ಅವರು ಬಹಳ ಪ್ರತಿಭಾವಂತೆ’ ಎಂದು ತಮ್ಮ ಸಹನಟಿಯ ಬಗ್ಗೆ ಮೆಚ್ಚಿ ಮಾತನಾಡಿದ್ದಾರೆ ಹೃತಿಕ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net