ಹಾಲಿವುಡ್​ನಿಂದ ಭಾರತಕ್ಕೆ ದೇಣಿಗೆ; 11 ಲಕ್ಷ ರೂ. ಕೊಟ್ಟ ಹೃತಿಕ್ ರೋಷನ್

Hrithik
Published on

ಭಾರತದಲ್ಲಿನ ಕೋವಿಡ್ ಸ್ಥಿತಿ ಕಂಡು ಹಾಲಿವುಡ್ ಮಂದಿಯೂ ಮರುಕ ವ್ಯಕ್ತಪಡಿಸಿದ್ದಾರೆ. ‘ಹೆಲ್ಪ್ ಇಂಡಿಯಾ ಬ್ರಿಥ್’ ಮೂಲಕ ನಿಧಿ ಸಂಗ್ರಹಣೆ ಕೆಲಸ ಶುರುವಾಗಿದ್ದು, ಭಾರತದ ಬೆನ್ನಿಗೆ ನಿಂತಿದ್ದಾರೆ. ಹಾಲಿವುಡ್​ನ ಖ್ಯಾತ ನಟ ವಿಲ್ ಸ್ಮಿತ್ 50 ಸಾವಿರ ಡಾಲರ್ ಅಂದರೆ 36 ಲಕ್ಷ ರೂ. ನೀಡಿದ್ದಾರೆ. ಅವರನ್ನೊಳಗೊಂಡಂತೆ ಇನ್ನೂ ಹಲವು ಕಲಾವಿದರು ಕೈಲಾದಷ್ಟು ಹಣವನ್ನು ನೀಡಿದ್ದಾರೆ. ಹಾಲಿವುಡ್​ನವರ ಈ ಕಾರ್ಯಕ್ಕೆ ಬಾಲಿವುಡ್ ನಟ ಹೃತಿಕ್ ರೋಷನ್ ಸಹ ಕೈ ಜೋಡಿಸಿ ‘ಹೆಲ್ಪ್ ಇಂಡಿಯಾ ಬ್ರಿಥ್’ಗೆ ದೇಣಿಗೆ ರೂಪದಲ್ಲಿ 11 ಲಕ್ಷ ರೂ (15 ಸಾವಿರ ಡಾಲರ್) ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net