ನವೆಂಬರ್​ನಲ್ಲಿ ಹೃತಿಕ್​ ಮದುವೆಯಂತೆ; ಈ ವಿಷಯ ಅವರಪ್ಪನಿಗೇ ಗೊತ್ತಿಲ್ಲವಂತೆ!

Hrithik Roshan - Saba Azad 1
Published on

ಮುಂಬೈ: ಸೂಜಾನ್​ ಖಾನ್​ ಜತೆಗೆ ವೈವಾಹಿಕ ಜೀವನವನ್ನು ಮುರಿದುಕೊಂಡ ನಂತರ, ಸಾಬಾ ಆಜಾದ್​ ಎಂಬ ಇನ್ನೊಬ್ಬ ಯುವತಿಯ ಜತೆಗೆ ಹೃತಿಕ್​ ರೋಶನ್​ ಡೇಟಿಂಗ್​ ಮಾಡುತ್ತಿರುವ ವಿಷಯ ಕಳೆದೊಂದು ವರ್ಷದಿಂದ ಕೇಳಿಬರುತ್ತಿದೆ. ಆದರೆ, ಹೊಸ ವಿಷಯವೆಂದರೆ, ಹೃತಿಕ್​ ಮತ್ತು ಸಬಾ ಇದೇ ನವೆಂಬರ್​ನಲ್ಲಿ ಮದುವೆಯಾಗುತ್ತಿದ್ದಾರಂತೆ.

ಹೌದು, ಹೃತಿಕ್ ಮತ್ತು ಸಾಬಾ ಆಜಾದ್​ ಇದೇ ನವೆಂಬರ್​ ತಿಂಗಳಲ್ಲಿ ಮದುವೆಯಾಗುತ್ತದ್ದಾರಂತೆ. ಹಾಗಂತ ಸುದ್ದಿಯೊಂದು ಬಾಲಿವುಡ್​ ಅಂಗಳದಲ್ಲಿ ಕೇಳಿ ಬರುತ್ತಿದೆ. ಆದರೆ, ವಿಚಿತ್ರವೆಂದರೆ, ಇಂಥದ್ದೊಂದು ವಿಷಯ ಹೃತಿಕ್​ ಮನೆಯವರಿಗೇ ಇನ್ನೂ ಗೊತ್ತಿಲ್ಲದಿರುವುದು.

ಹೃತಿಕ್​ ಮದುವೆ ಯಾವಾಗ ಎಂದು ಬಾಲಿವುಡ್​ ಮಂದಿ ನೇರವಾಗಿ ಹೃತಿಕ್​ ಅಪ್ಪ ರಾಕೇಶ್​ ರೋಶನ್​ ಅವರನ್ನು ಸಂಪರ್ಕಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ರಾಕೇಶ್​ ರೋಶನ್​, ತಮಗೆ ಈ ವಿಷಯದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿಕೊಂಡಿದ್ದಾರೆ.

ಇನ್ನು, ಕಳೆದ ವರ್ಷ ಬಿಡುಗಡೆಯಾದ 'ವಿಕ್ರಮ್​ ವೇದ' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಹೃತಿಕ್​ ರೋಶನ್​, ಈಗ 'ಫೈಟರ್​' ಎಂಬ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರವನ್ನು ಸಿದ್ಧಾರ್ಥ್​ ಆನಂದ್​ ನಿರ್ದೇಶನ ಮಾಡುತ್ತಿದ್ದು, ಕಾಶ್ಮೀರದಲ್ಲಿ ಚಿತ್ರೀಕರಣ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net