ಫ್ರೆಶ್​ ಮಜ್ಜಿಗೆ ಮಾಡೋದು ಹೇಗೆ? ರಾಮ್​ ಚರಣ್​ ತೇಜ ಕಲಿಸಿಕೊಡ್ತಿದ್ದಾರೆ ನೋಡಿ..

WhatsApp Image 2020-05-02 at 3.30.04 PM
Published on

ಲಾಕ್​ಡೌನ್​ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಕಾಲಕಳೆಯಬೇಕಾಗಿದೆ. ಹೆಣ್ಮಕ್ಕಳ ಜತೆಗೆ ಪುರುಷರೂ ಹೊಸ ಬಗೆಯ ಅಡುಗೆಗಳನ್ನು ಕಲಿಯುತ್ತಿದ್ದಾರೆ. ಮನೆಕೆಲಸದಲ್ಲೂ ಪಾಲುದಾರಿಕೆ ಹೊಂದಿದ್ದಾರೆ. ಆರೋಗ್ಯದ ಬಗ್ಗೆ ಕಾಳಜಿ ಉಳ್ಳವರು ನಿತ್ಯ ಯೋಗ, ವ್ಯಾಯಾಮದ ಮೊರೆ ಹೋದರೆ, ಮತ್ತೆ ಕೆಲವರು ಕರಕುಶಲ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಒಟ್ಟಿನಲ್ಲಿ ಎಲ್ಲರೂ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅದೇ ರೀತಿ ಟಾಲಿವುಡ್​ ಸ್ಟಾರ್ ನಟ ರಾಮ್​ಚರಣ್​ ತೇಜ, ಮಜ್ಜಿಗೆ ಮಾಡುವುದು ಹೇಗೆ ಎಂಬುದನ್ನು ಕಲಿಯುತ್ತಿದ್ದಾರೆ.

ಹೌದು, ತೆರೆಮೇಲೆ ರೌಡಿಗಳ ಹುಟ್ಟಡಗಿಸಿ, ಖಡಕ್​ ಡೈಲಾಗ್​​ಗಳ ಮೂಲಕವೇ ರಂಜಿಸುವ ರಾಮ್​ಚರಣ್​ ಕೈಯಲ್ಲೀಗ ಕಡಗೋಲು ಹಿಡಿದಿದ್ದಾರೆ. ತಾಯಿ ಮತ್ತು ಅಜ್ಜಿಯ ಜತೆಗೆ ನಿಂತು ಕೆನೆಗಟ್ಟಿದ ಮೊಸರನ್ನು ಮಜ್ಜಿಗೆ ರೂಪಕ್ಕೆ ತರುತ್ತಿದ್ದಾರೆ. ಮೊಮ್ಮಗನಿಗೆ ಮಜ್ಜಿಗೆ ಮಾಡುವ ವಿಧಾನವನ್ನು ಅಜ್ಜಿ ಹೇಳಿದರೆ, ಅಮ್ಮ ಮಗನ ಮಜ್ಜಿಗೆ ಸಾಹಸವನ್ನು ವೀಕ್ಷಿಸುತ್ತಿದ್ದಾರೆ. ಒಟ್ಟಾರೆಯಾಗಿ ಸ್ಟಾರ್ ನಟನ ಮಜ್ಜಿಗೆ ಮಾಡುವ ಕಾಯಕ, ಅಭಿಮಾನಿಗಳಿಗೂ ಇಷ್ಟವಾಗಿದ್ದು, ಬಗೆಬಗೆ ರೀತಿಯಲ್ಲಿ ಕಮೆಂಟ್​ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ರಾಜಮೌಳಿ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ‘ರೌದ್ರಂ ರಣಂ ರುಧಿರಂ’ ಸಿನಿಮಾ ಕೆಲಸಗಳಲ್ಲಿ ರಾಮ್​ಚರಣ್​ ಬಿಜಿಯಾಗಿದ್ದರು. ಆದರೆ, ಲಾಕ್​ಡೌನ್​ ಹಿನ್ನೆಲೆಯಲ್ಲಿ ಚಿತ್ರೀಕರಣ ಸ್ಥಗಿತಗೊಂಡಿದೆ. ಈ ಚಿತ್ರದಲ್ಲಿ ಜೂ. ಎನ್​ಟಿಆರ್​, ಆಲಿಯಾ ಭಟ್​, ಅಜಯ್​ ದೇವಗನ್​ ಸಹ ನಟಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net