More

    ರಾಮಾಯಣ, ಮಹಾಭಾರತದ ಬಳಿಕ ಈ ಧಾರಾವಾಹಿಗೂ ಸಿಕ್ತು ಮರುಪ್ರಸಾರ ಭಾಗ್ಯ

    ನವದೆಹಲಿ: ಲಾಕ್​ಡೌನ್​ ಹಿನ್ನೆಲೆಯಲ್ಲಿ ಹಳೇ ಶೋ, ಧಾರಾವಾಹಿಗಳಿಗೆ ಬೇಡಿಕೆ ಸೃಷ್ಟಿಯಾಗಿದೆ. ಹಾಗಾಗಿ ದಶಕಗಳ ಹಿಂದೆ ಇತಿಹಾಸ ಸೃಷ್ಟಿಸಿದ್ದ ಎಷ್ಟೋ ಧಾರಾವಾಹಿಗಳು ಮರುಪ್ರಸಾರ ಆರಂಭಿಸಿವೆ. ಇದೀಗ ಆ ಸಾಲಿಗೆ ಕೊಂಚ ತಡವಾಗಿಯಾದರೂ ದರ್ಶನ ಕೊಡಲು ಸಿದ್ಧವಾಗಿದೆ ಶ್ರೀಕೃಷ್ಣ ಧಾರಾವಾಹಿ.

    ಹೌದು, 1993ರಿಂದ 1996ರವರೆಗೆ ದೂರದರ್ಶನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಶ್ರೀಕೃಷ್ಣ ಧಾರಾವಾಹಿ ಇದೀಗ ಮತ್ತೆ ಮರುಪ್ರಸಾರಕ್ಕೆ ಅಣಿಯಾಗಿದ್ದು, ಮೇ 3ರರ ಭಾನುವಾರ ರಾತ್ರಿ 9ಗಂಟೆಗೆ ಡಿಡಿ ನ್ಯಾಶನಲ್​ ವಾಹಿನಿಯಲ್ಲಿ ಮರು ಪ್ರಸಾರ ಆರಂಭಿಸಲಿದೆ.

    ಇದನ್ನೂ ಓದಿ: ಮರುಪ್ರಸಾರವಾಗಿದ್ದ ರಾಮಾಯಣ ಸೃಷ್ಟಿಸಿತು ವಿಶ್ವ ದಾಖಲೆ https://www.vijayavani.net/ramayan-breaks-records-becomes-most-watched-show-in-the-world/

    ಅಂದಹಾಗೆ, ಈ ವಿಚಾರವನ್ನು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್​ ಜಾವ್ಡೇಕರ್​ ಟ್ವಿಟರ್​ ಮೂಲಕ ಸ್ಪಷ್ಟಪಡಿಸಿದ್ದಾರೆ. ಈ ಧಾರಾವಾಹಿಯನ್ನು ನಿರ್ದೇಶಿಸಿ ನಿರ್ಮಾಣ ಮಾಡಿದ್ದು ರಾಮಾಯಣ ಖ್ಯಾತಿಯ ರಮಾನಂದ್ ಸಾಗರ್. ಸ್ವಪ್ನಿಲ್ ಜೋಶಿ ಬಾಲ ಕೃಷ್ಣನಾಗಿ ಕಾಣಿಸಿಕೊಂಡರೆ, ಸರ್ವಧಾಮನ್​ ಬ್ಯಾನರ್ಜಿ ವಯಸ್ಕ ಶ್ರೀಕೃಷ್ಣನ ಅವತಾರ ಎತ್ತಿದ್ದಾರೆ. ಈಗಾಗಲೇ ಮರುಪ್ರಸಾರವಾಗುತ್ತಿರುವ ರಾಮಾಯಣ ವಿಶ್ವದಾಖಲೆ ಬರೆದರೆ, ಮಹಾಭಾರತ, ಶಕ್ತಿಮಾನ್​ ವೀಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಗಿಟ್ಟಿಸಿಕೊಳ್ಳುತ್ತಿವೆ. (ಏಜೆನ್ಸೀಸ್​)

    ರಿಷಿ ಕಪೂರ್​ ನೆನೆದು ಭಾವುಕ ಪತ್ರ ಬರೆದ ಹೃತಿಕ್​ ರೋಷನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts