ಸಿನಿತಾರೆಯರು ತಮ್ಮ ಸಿನಿಮಾ ಸಂಭಾವನೆಯ ಜತೆಗೆ ಅನೇಕ ಜಾಹೀರಾತುಗಳಲ್ಲಿ ನಟಿಸುತ್ತಾರೆ. ಅಷ್ಟೇ ಅಲ್ಲ, ಹಲವು ಬ್ರ್ಯಾಂಡ್ ಕಂಪನಿಗಳಿಗೆ ರಾಯಭಾರಿ ಸಹ ಆಗಿರುತ್ತಾರೆ. ಇನ್ನು, ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಾವು ಅಭಿನಯಿಸಿದ ಜಾಹೀರಾತುಗಳ ವಿಡಿಯೋಗಳನ್ನು, ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಹಾಗಾಗಿ, ಸಿನಿಮಾಗಳ ಜೊತೆಗೆ ಸಿನಿತಾರೆಯರಿಗೆ ಜಾಹೀರಾತುಗಳು ಮತ್ತು ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್ಗಳು, ಬ್ರ್ಯಾಂಡ್ ಕಂಪನಿಗಳಿಗೆ ರಾಯಭಾರಿಯಾಗುವುದರ ಮೂಲಕ ಕೂಡಾ ವರಮಾನ ಪಡೆಯುವುದು ಸಹಜ ಎಂದೇ ಹೇಳಬೇಕು. ಇನ್ನು, ಇದಕ್ಕೆ ಇತ್ತೀಚೆಗೆ ವಿಚ್ಛೇದನ ಪಡೆದ ನಟಿ ಸಮಂತಾ ರುತ್ ಪ್ರಭು ಕೂಡಾ ಹೊರತಾಗಿಲ್ಲ. ನಟಿ ಸಮಂತಾ ಹಲವು ಬ್ರ್ಯಾಂಡ್ಗಳಿಗೆ ರಾಯಭಾರಿ ಆಗಿದ್ದಾರೆ. ಸಿನಿಮಾಗಳಿಗೆ ಅಂತೂ ನಟಿ ಸಮಂತಾ ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ.