ಕಳೆದ ಮೂರು ದಿನಗಳಿಂದ ನಟ ವಿಲ್ ಸ್ಮಿತ್ ಅವರು ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಹೌದು, ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟ ಸ್ಮಿತ್ ಅವರ ಪತ್ನಿ ಜಡಾ ಪಿಂಕೆಟ್ ಸ್ಮಿತ್ ಬಗ್ಗೆ ಹಾಸ್ಯ ನಟ ಕ್ರಿಸ್ ರಾಕ್ ಕಾಮಿಡಿ ಮಾಡಿದ ಕಾರಣಕ್ಕೆ ವೇದಿಕೆಗೆ ತೆರಳಿ ಅವರ ಕಪಾಳಕ್ಕೆ ಬಾರಿಸಿ ಇಡೀ ವಿಶ್ವದಲ್ಲಿ ಎಲ್ಲರ ಚರ್ಚೆಯ ಕೇಂದ್ರ ಬಿಂದು ಆಗಿದ್ದರು. ಇನ್ನು, ಅಂದು ಅವರಿಗೆ ‘ಅತ್ಯುತ್ತಮ ನಟ’ ಆಸ್ಕರ್ ಪ್ರಶಸ್ತಿ ಸಿಕ್ಕರೂ, ಅದಕ್ಕಾಗಿ ಅವರು ಖುಷಿಪಡುವುದಕ್ಕಿಂತಲೂ ಹೆಚ್ಚಾಗಿ ಈ ವಿವಾದದ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಯಿತು. ಈಗಾಗಲೇ, ನಟ ಕ್ರಿಸ್ ರಾಕ್ ಅವರ ಕೆನ್ನೆಗೆ ಬಾರಿಸಿದ ಸ್ಮಿತ್ ಅವರ ವಿಡಿಯೋ ವಿಶ್ವಾದ್ಯಂತ ವೈರಲ್ ಆಗಿದೆ. ಈ ರೀತಿ ಹಲ್ಲೆ ಮಾಡಿದ್ದಕ್ಕಾಗಿ ನಟ ವಿಲ್ ಸ್ಮಿತ್ ಅವರು ಅನೇಕರಿಂದ ಟೀಕೆಗೆ ಒಳಗಾಗಿದ್ದಾರೂ, ಕೆಲವರು ಅವರ ನಡೆಯನ್ನು ಸಮರ್ಥಿಸಿದ್ದು ಇದೆ.