ಒಟಿಟಿಗೆ ಎಂಟ್ರಿ ಕೊಟ್ಟ ಹೊಸಬರ 'ಹೊಸ ದಿನಚರಿ'

hosa dinachari
Published on

ಬೆಂಗಳೂರು: ಸಾಫ್ಟ್​ವೇರ್ ಹಿನ್ನೆಲೆಯಿಂದ ಬಂದಿರುವ ಕೀರ್ತಿ ಶೇಖರ್ ಹಾಗೂ ವೈಶಾಖ್ ಪುಷ್ಪಲತಾರವರ ಚೊಚ್ಚಲ ಹೆಜ್ಜೆ 'ಹೊಸ ದಿನಚರಿ'. ಒಂದಿಷ್ಟು ಕಿರುಚಿತ್ರಗಳನ್ನು ನಿರ್ಮಿಸಿದ್ದ ಕೀರ್ತಿ, ಹೊಸ ದಿನಚರಿ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಇವರಿಗೆ ವೈಶಾಖ್ ಕೂಡ ಸಾಥ್ ನೀಡಿದ್ದರು.

ಇವರಿಬ್ಬರ ಸಾರಥ್ಯದಲ್ಲಿ ಮೂಡಿಬಂದಿದ್ದ ಈ ಸಿನಿಮಾ ಕಳೆದ ಡಿಸೆಂಬರ್​ನಲ್ಲಿ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿತ್ತು. ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದ್ದ ಹೊಸ ದಿನಚರಿ ಚಿತ್ರವೀಗ ಒಟಿಟಿಗೆ ಲಗ್ಗೆ ಇಟ್ಟಿದೆ. ಸೋಮವಾರ (ಸೆಪ್ಟೆಂಬರ್ 4) ಅಮೇಜಾನ್ ಪ್ರೈಮ್​ನಲ್ಲಿ ರಿಲೀಸ್ ಆಗಿದೆ.

ಎಲ್ಲರ ಜೀವನದಲ್ಲೂ ಪ್ರೀತಿ ಇದೇ ಇರುತ್ತದೆ. ಆದರೆ ಪ್ರೀತಿಸಿದ ವ್ಯಕ್ತಿ ಕೊನೆಯವರೆಗೂ ಇರುತ್ತಾರಾ? ಅವರಿಲ್ಲದೇ ಬೇರೊಬ್ಬರು ಜೀವನದಲ್ಲಿ ಬಂದಾಗ ಏನಾಗುತ್ತದೆ ಎಂಬ ಕಥಾಹಂದರ ಹೊಂದಿರುವ ಸಿನಿಮಾ ಹೊಸ ದಿನಚರಿ. ಬಾಬು ಹಿರಣ್ಣಯ್ಯ ಮತ್ತು ಅರುಣಾ ಬಾಲರಾಜ್ ಜೊತೆಗೆ ಬಹುತೇಕ ಹೊಸಬರ ನಟಿಸಿದ್ದಾರೆ. ಉಳಿದಂತೆ, ದೀಪಕ್ ಸುಬ್ರಹ್ಮಣ್ಯ, ಚೇತನ್ ವಿಕ್ಕಿ, ಮಂದಾರ, ವರ್ಷ, ಶ್ರೀಪ್ರಿಯಾ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ವೈಶಾಖ್ ವರ್ಮಾ ಅವರ ಸಂಗೀತ, ಸಾಹಿತ್ಯ, ಅಶ್ವಿನ್ ಹೇಮಂತ್ ಅವರ ಹಿನ್ನೆಲೆ ಸಂಗೀತ, ರಂಜಿತ್ ಸೇತು ಸಂಕಲನ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net