ಕರೀನಾ ಕಪೂರ್​ ಕುರಿತು ಈ ಹೇಳಿಕೆ ಕೊಟ್ಟು ಟ್ರೋಲ್​​ಗೊಳಗಾದ ಪಾಕ್​ ನಟಿ!

Kareena
Published on

ಮುಂಬೈ: ಬಾಲಿವುಡ್​ ನಟಿ ಕರೀನಾ ಕಪೂರ್​ ಕುರಿತು ಹೇಳಿಕೆ ನೀಡಿರುವ ಪಾಕಿಸ್ತಾನದ ನಟಿ ಈಗ ಪೇಚಿಗೆ ಸಿಲುಕಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪಾಕ್​ನ ಹೀರಾ ಸಲ್ಮಾನ್​ ಕರೀನಾ ಕಪೂರ್​ ಬಗ್ಗೆ ವಿಡಿಯೋವೊಂದನ್ನು ಹರಿಬಿಟ್ಟು, ಕರೀನಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಬಾಡಿ ಶೇಮಿಂಗ್​ ಬಗ್ಗೆ ಮಾತನಾಡಿರುವ ಈಕೆ ಇಷ್ಟೇ ಮಾತುಕತೆ ಆಗಿದ್ದರೆ ಈ ಚರ್ಚೆಯಾಗುತ್ತಿರಲಿಲ್ಲವೇನೋ, ಆದರೆ ಈಕೆ ಖ್ಯಾತ ನಟಿಯ ಕುರಿತು ಹೇಳಿಕೆ ಕೊಟ್ಟು ವಿವಾಕ್ಕೆಡೆಮಾಡಿಕೊಟ್ಟಿದ್ದಾರೆ.

ಕರೀನಾ ಕಪೂರ್​​ ದಪ್ಪ ಎಂದು ಟೀಕಿಸಿದ ಹೀರಾಮಣಿಗೆ, ಟ್ವಿಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ. ಮೂರು ತಿಂಗಳಲ್ಲಿ 10 ಕೆಜಿ ಕಡಿಮೆ ಮಾಡಿಕೊಂಡ ಈ ನಟಿ ನಾನು ಈಗ ಸಣ್ಣ ಆಗಿದ್ದೇನೆ. ಕತ್ರಿನಾ ಕೈಫ್​, ದೀಪಿಕಾ ಪಡುಕೋಣೆ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಆದರೆ ಕರೀನಾ ಅವರನ್ನು ದಪ್ಪ ಎಂದು ಹೇಳಿರುವುದು ಅವರ ಅಭಿಮಾನಿಗಳಲ್ಲಿ ಅರಗಿಸಿಕೊಳ್ಳಲು ಆಗುತ್ತಿಲ್ಲ.

ತನ್ನ ಪತಿ ಟೀಕಿಸಿದ್ದರಿಂದ ನಾನು ನನ್ನ ದೇಹವನ್ನು ಕರಗಿಸಿಕೊಂಡಿದ್ದೇನೆ. ನನಗೆ ಈ ರೀತಿ ಹೇಳುವವರು ಕರೀನಾ ಕಪೂರ್​ ಅವರಿಗೆ ಏನೆಂದು ಹೇಳಬಹುದು ಎಂದು ಟೀಕಿಸಿದ್ದಾರೆ. ನನಗೆ ಅನ್ನಿಸುವುದು ಎಂದರೆ ಟೀಕೆ ಮಾಡುವ ಗಂಡಂದಿರು ಒಳ್ಳೆಯವರೆಂದು ಹೇಳಿಕೊಂಡಿದ್ದಾರೆ.

ಕರೀನಾ ಕಪೂರ್ ಬಗ್ಗೆ ಮಾತನಾಡುವ ಯೋಗ್ಯತೆ ನಿನಗೆ ಇಲ್ಲ ಎಂದು ಕೆಲ ಟ್ವಿಟ್ಟಿಗರು ಹೀರಾಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net