ಇನ್ನು, ಮಳಯಾಲಂನ ಖ್ಯಾತ ನಟ ಪೃಥ್ವಿರಾಜ್ ಅವರ ಮುಂಬರುವ 'ಜನ ಗಣ ಮನ' ಏಪ್ರಿಲ್ 28 ರಂದು ಥಿಯೇಟರ್ಗಳಲ್ಲಿ ಬಿಡುಗಡೆಯಾಗಲಿದ್ದು, ದಕ್ಷಿಣದ ಮೆಗಾಸ್ಟಾರ್ ನಟ ಚಿರಂಜೀವಿ ಅವರ ಚಿತ್ರ 'ಆಚಾರ್ಯ' ಸಹ ಏಪ್ರಿಲ್ 29 ರಂದು ರಿಲೀಸ್ ಆಗಲಿದೆ. ಹಾಗೆಯೇ, ಮುಂಬರುವ ತಮಿಳಿನ ರೋಮ್ಯಾಂಟಿಕ್ ಕಾಮಿಡಿ ಸಿನಿಮಾ 'ಕಾತು ವಾಕುಲಾ ರೆಂಡು ಕಾದಲ್'ನಲ್ಲಿ ನಟ ವಿಜಯ್ ಸೇತುಪತಿ, ನಯನತಾರಾ, ಸಮಂತಾ ಅವರು ನಟಿಸಿದ್ದು, ಈ ಚಿತ್ರ ಕೂಡಾ ಏಪ್ರಿಲ್ 28 ರಂದು ಬಿಡುಗಡೆಯಾಗುತ್ತದೆ. ಹಿಂದಿಯಲ್ಲಿ ಅಂತೂ ಎರಡು ದೊಡ್ಡ ಸಿನಿಮಾಗಳು ರಿಲೀಸ್ಗೆ ರೆಡಿಯಾಗಿವೆ. ಆದರೆ, ಆ ಎರಡು ಚಿತ್ರಗಳಾದ 'ರನ್ವೇ 34', 'ಹೀರೋಪಂತಿ 2' ಸಹ ಏಪ್ರಿಲ್ 29 ಕ್ಕೆ ಬಿಡುಗಡೆಯಾಗಲಿವೆ. ಹಾಗಾಗಿ, ಈ ಎಲ್ಲಾ ಚಿತ್ರಗಳು ರಿಲೀಸ್ ಆಗುವವರೆಗೆ ಬಾಕ್ಸ್ ಆಫೀಸ್ನಲ್ಲಿ 'ಕೆಜಿಎಫ್ 2' ಸಿನಿಮಾದೆ ಹವಾ.