ಹೀಗಾಗಿ, ಫ್ಯಾನ್ಸ್ಗೆ ಸಿನಿಮಾ ಭಾವನಾತ್ಮಕವಾಗಿ ಸಖತ್ ಕನೆಕ್ಟ್ ಆಗದ್ದಾರೆ ಎಂದರೇ ತಪ್ಪಾಗುವುದಿಲ್ಲ. ಇನ್ನು, ದೊಡ್ಮನೆಯ ಮೂವರು ಅಣ್ಣ ತಮ್ಮಂದಿರನ್ನು ಬೆಳ್ಳಿ ಪರದೆಯ ಮೇಲೆ ನೋಡುತ್ತಿರುವುದು ಅಭಿಮಾನಿಗಳಿಗೆ ಒಂದು ಕಡೆ ಖುಷಿ, ಮತ್ತೊಂದು ಕಡೆ ನೋವನ್ನು ನೀಡಿದೆ. ಮತ್ತೊಂದೆಡೆ, ಅಪ್ಪು ಹುಟ್ಟು ಹಬ್ಬದ ಅಂಗವಾಗಿ ''ಅಪ್ಪು ಯುತ್ ಬ್ರಿಗೆಡ್'' ವತಿಯಿಂದ ಹಲವು ಕಾರ್ಯಕ್ರಮಗಳನ್ನು ಬೇಂಗಳೂರಿನಲ್ಲಿ ಆಯೋಜಿಸಲಾಗುತ್ತು. ಎಲ್ಲಾ ಥಿಯೇಟರ್ಗಳಲ್ಲಿ ನೇತ್ರದಾನ, ಅನ್ನದಾನ, ರಕ್ತದಾನ, ಸಸಿಗಳನ್ನು ನೆಡುವ ಮೂಲಕ ಅಪ್ಪು ಮೇಲೆ ಇರುವ ಪ್ರೀತಿಯನ್ನು ತೋರಿಸಿಕೊಂಡಿದ್ದಾರೆ. ಜೇಮ್ಸ್ ಜಾತ್ರೆಯ ಮೊದಲ ದಿನದ ಅಬ್ಬರ ಹೇಗಿತ್ತು ಎಂದು ತಿಳಿಯಲು ಈ ವಿಡಿಯೋ ತಪ್ಪದೇ ವೀಕ್ಷಿಸಿ.