ಕಲಾವಿದರ ಸಂಘದ ಕಾರ್ಯಕ್ರಮದಲ್ಲಿ ನಡೆದ ಕಹಿ ಘಟನೆಯನ್ನು ಬಿಚ್ಚಿಟ್ಟ ನಟಿ ಕಸ್ತೂರಿ ಶಂಕರ್​!

Kasthuri Shankar
Published on

ಹೈದರಾಬಾದ್​: ನಟಿ ಕಸ್ತೂರಿ ಅವರು 80 ಮತ್ತು 90ರ ದಶಕದಲ್ಲಿ ಬಹು ಬೇಡಿಕೆ ನಟಿಯಾಗಿದ್ದರು. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸುವ ಮೂಲಕ ಬಹುಭಾಷಾ ನಟಿ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಎಲ್ಲ ಸಿನಿರಂಗದ ಸ್ಟಾರ್​ ನಟರ ಜತೆ ಕಸ್ತೂರಿ ಅಭಿನಯಿಸಿದ್ದಾರೆ. ಈಗಲೂ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಕಸ್ತೂರಿ ಅವರು ಸಕ್ರಿಯರಾಗಿದ್ದಾರೆ. ಅವರು ಸಾಮಾಜಿಕ ಕಾರ್ಯಕರ್ತೆಯೂ ಹೌದು.

ರಾಜಕೀಯ ಹಾಗೂ ಸಿನಿಮಾ ಸೇರಿದಂತೆ ಸಮಾಜದಲ್ಲಿ ನಡೆಯುವ ಕೆಲ ಘಟನೆಗಳ ಬಗ್ಗೆ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವುದರಲ್ಲಿ ಅವರು ಎಂದಿಗೂ ದೂರ ಉಳಿಯುವುದಿಲ್ಲ. ಕಸ್ತೂರಿ ಅವರಿಗೆ ವಯಸ್ಸು 48 ಆದರೂ ಗ್ಲಾಮರ್​ ಪ್ರದರ್ಶನ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಹಾಟ್​ ಫೋಟೋಗಳನ್ನು ಹರಿಬಿಡುವ ಮೂಲಕ ಪಡ್ಡೆ ಹುಡುಗರ ಹೃದಯದ ಬಡಿತವನ್ನು ಹೆಚ್ಚಿಸುತ್ತಿರುತ್ತಾರೆ.

ಇದೀಗ ಕಸ್ತೂರಿ ಅವರು ತಮಗಾದ ಕಹಿ ಘಟನೆಯೊಂದು ಮಾಧ್ಯಮ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ತಮಿಳುನಾಡು ಕಲಾವಿದರ ಸಂಘದಿಂದ ಒಂದು ಕಾರ್ಯಕ್ರಮ ನಡೆಯಿತು. ನಾನು ಕೂಡ ಆ ಕಾರ್ಯಕ್ರಮಕ್ಕೆ ತೆರಳಿದ್ದೆ. ಕಾರ್ಯಕ್ರಮ ಮುಗಿದಾಗ ಅಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದರು. ಇದೇ ಸಂದರ್ಭದಲ್ಲಿ ಹಿಂದಿನಿಂದ ನನ್ನ ನಿತಂಬವನ್ನು ಯಾರು ಅದುಮಿದಂತೆ ಭಾಸವಾಯಿತು.

ಈ ಘಟನೆಯ ಸಂದರ್ಭದಲ್ಲಿ ನನ್ನ ತಂದೆಯ ನನ್ನ ಪಕ್ಕದಲ್ಲಿಯೇ ಇದ್ದರು. ನಾನು ತಕ್ಷಣ ಭದ್ರವಾಗಿ ಆತನ ಕೈಹಿಡಿದುಕೊಂಡು. ಆತನನ್ನು ಮುಂಭಾಗಕ್ಕೆ ಎಳೆದುಕೊಳ್ಳುವಾಗ ಆತ ನನ್ನನ್ನು ನೋಡಿ ಗಾಬರಿಯಿಂದ ಕೂಗಿಕೊಂಡ, ಸಹೋದರಿ, ಸಹೋದರಿ ನನ್ನನ್ನು ಕ್ಷಮಿಸು, ಕ್ಷಮಿಸು ಎಂದು ಪರಿ ಪರಿಯಾಗಿ ಬೇಡಿಕೊಂಡ. ಹೀಗಾಗಿ ಆ ವಿಚಾರವನ್ನು ಅಲ್ಲಿಯೇ ಕೊನೆ ಮಾಡಿದೆ ಎಂದು ಕಸ್ತೂರಿ ಅವರು ಹೇಳಿಕೊಂಡಿದ್ದಾರೆ.

ಪ್ರಸ್ತುತ ಕಸ್ತೂರಿ ಶಂಕರ್​ ಅವರು ಪ್ರಸ್ತುತ ತಮಿಳಿನ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಬಿಜಿಯಾಗಿದ್ದಾರೆ. ಇವರು ಕನ್ನಡದಲ್ಲಿ ಜಾಣ, ಹಬ್ಬ ಹಾಗೂ ತುತ್ತಾ ಮುತ್ತಾ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net