ಹೊಸ ರೂಪಾಂತರ ಕರೊನಾ ವೈರಸ್ ಭೀತಿ: ಲಂಡನ್​ನಿಂದ ಬಂದ ಮೇಲೆ ಕ್ವಾರಂಟೈನ್​ ಆಗದ ಹರ್ಷಿಕಾ!

Harshika
Published on

ಬೆಂಗಳೂರು: ಬ್ರಿಟನ್​ನಲ್ಲಿ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇಡೀ ಜಗತ್ತು ಮತ್ತೊಮ್ಮೆ ಆತಂಕಕ್ಕೆ ಒಳಗಾಗಿದೆ. ದೇಶದಲ್ಲೂ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ವಿದೇಶ ಪ್ರವಾಸಿಗರ ಮೇಲೆ ಹದ್ದಿನ ಕಣ್ಣಿಟ್ಟಿದೆ.

ಹೀಗಿರುವಾಗ ಇತ್ತೀಚೆಗಷ್ಟೇ ವಿದೇಶದ ಪ್ರವಾಸ ಮುಗಿಸಿ ಬಂದಿರುವ ಸ್ಯಾಂಡಲ್​ವುಡ್ ನಟಿ ಹರ್ಷಿಕಾ ಪೂಣಚ್ಚ ಕ್ವಾರಂಟೈನ್​ಗೆ ಒಳಗಾಗದಿರುವುದು ಗಮನಕ್ಕೆ ಬಂದಿದೆ. ಹರ್ಷಿಕಾ ಲಂಡನ್​ನಿಂದ ಕಳೆದವಾರಷ್ಟೇ ಬೆಂಗಳೂರಿಗೆ ಬಂದಿದ್ದಾರೆ. ಲಂಡನ್​ನ ಬೀದಿ ಬೀದಿಯಲ್ಲಿ ಹರ್ಷಿಕಾ ಸುತ್ತಾಡಿದ್ದು, ಅಲ್ಲಿಂದ ತವರಿಗೆ ಮರಳಿದ ಮೇಲೆ ನಟಿ ಕ್ವಾರಂಟೈನ್ ಕೂಡ ಆಗಿಲ್ಲ.

ಇನ್ನು ಇಂಗ್ಲೆಂಡ್​ನಲ್ಲಿ ಹೊಸ ರೂಪಾಂತರ ವೈರಸ್​ ಕಾಟ ಹೆಚ್ಚಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಬ್ರಿಟನ್​ಗೆ ಹಾರಾಡುವ ವಿಮಾನಗಳನ್ನು ಬ್ಯಾನ್ ಮಾಡಿದೆ. ವಿಮಾನ ಹಾರಾಟ ಬ್ಯಾನ್​ ಮಾಡುವ ಮುನ್ನವೇ ಹರ್ಷಿಕಾ ಬೆಂಗಳೂರಿಗೆ ಆಗಮಿಸಿದ್ದಾರೆ. ಹೀಗಾಗಿ ನಟಿ ಕ್ವಾರಂಟೈನ್​ ಒಳಗಾಗುವುದು ಸೂಕ್ತ ಎನಿಸಿದೆ.

ಅಂದಹಾಗೆ ಬ್ರಿಟನ್​ನಲ್ಲಿ ಪತ್ತೆಯಾಗಿರುವ ಹೊಸ ರೂಪಾಂತರ ಕರೊನಾ ವೈರಸ್​ ಹಿಂದಿನ ವೈರಸ್​ಗಿಂತಲೂ ಹೆಚ್ಚು ಅಪಾಯಕಾರಿ ಎನ್ನಲಾಗುತ್ತಿದೆ. ಅಲ್ಲದೆ, ಗರಿಷ್ಠ 70ಕ್ಕಿಂತಲೂ ವೈರಸ್​ ವೇಗವಾಗಿ ಹರಡುತ್ತದೆ ಎಂದು ಹೇಳಲಾಗಿದೆ. ಹೀಗಾಗಿ ಸುಮಾರು 30 ದೇಶಗಳು ಬ್ರಿಟನ್​ಗೆ ಹೋಗುವ ವಿಮಾನಗಳನ್ನು ಬ್ಯಾನ್​ ಮಾಡಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net