ಹ್ಯಾಪಿ ಬರ್ತ್​ಡೇ ಡಾಲಿ ಧನಂಜಯ; ಚಿತ್ರತಂಡಗಳಿಂದ ಪೋಸ್ಟರ್ ಗಿಫ್ಟ್​

EgEn55VUMAAtBsr
Published on

ಸ್ಯಾಂಡಲ್​ವುಡ್ ಮಟ ಡಾಲಿ ಧನಂಜಯ್​ಗಿವತ್ತು ಹುಟ್ಟುಹಬ್ಬದ ಸಂಭ್ರಮ. ಈ ಸಂಭ್ರಮವನ್ನು ಅವರ ಅಭಿಮಾನಿಗಳು ಅಷ್ಟೇ ಅದ್ದೂರಿಯಾಗಿ ಸೆಲೆಬ್ರೆಟ್​ ಮಾಡುತ್ತಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಸೋಷಿಯಲ್​ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆಯೇ ಸುರಿಯುತ್ತಿದೆ. ಸಿನಿಮಾ ತಂಡಗಳೂ ಬಗೆಬಗೆ ಪೋಸ್ಟರ್​ಗಳನ್ನು ಬಿಡುಗಡೆ ಮಾಡಿಕೊಳ್ಳುವ ಮೂಲಕ ವಿಶ್​ ಮಾಡುತ್ತಿವೆ.

ಸಂತೋಷ್​ ಆನಂದ್​ ರಾಮ್ ನಿರ್ದೇಶನದ ಯುವರತ್ನ, ರೋಹಿತ್​ ಪದಕಿ ಅವರ ರತ್ನನ್​ ಪ್ರಪಂಚ, ದುನಿಯಾ ವಿಜಯ್ ನಾಯಕತ್ವದ ಸಲಗ, ಅಶು ಬೆದ್ರ ನಿರ್ಮಾಣ ಮಾಡುತ್ತಿರುವ ಹೆಡ್​ ಬುಷ್, ಬಡವ ರಾಸ್ಕಲ್​ ಮತ್ತು ಡಾಲಿ ಸಿನಿಮಾ ತಂಡಗಳು ಹೊಸ ಪೋಸ್ಟರ್ ರಿಲೀಸ್​ ಮಾಡಿಕೊಂಡು ನೆಚ್ಚಿನ ನಟನ ಜನ್ಮದಿನಕ್ಕೆ ಹಾರೈಸಿವೆ. ಆ ಎಲ್ಲ ಪೋಸ್ಟರ್​ಗಳು ಇಲ್ಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net