

ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ತೊಡಗಿಸಿಕೊಂಡು, ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಿ ಸೌತ್ ಇಂಡಸ್ಟ್ರಿಯಲ್ಲಿ ಹೆಸರು ಮಾಡಿದ್ದಾರೆ ನಟಿ ಹನ್ಸಿಕಾ. ಇದೀಗ ಇದೇ ನಟಿ ಬಾಲಿವುಡ್ನತ್ತ ಗಮನ ಹರಿಸಿದ್ದಾರಾ? ಹೌದು ಎನ್ನುತ್ತಿವೆ ಬಿಟೌನ್ ಮೂಲಗಳು. ಈಗಾಗಲೇ ಬಾಲಿವುಡ್ನ ಕೆಲ ಪ್ರಾಜೆಕ್ಟ್ಗಳಲ್ಲಿ ಹನ್ಸಿಕಾ ತೊಡಗಿಸಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಅಷ್ಟಕ್ಕೂ ಹನ್ಸಿಕಾಗೆ ಬಾಲಿವುಡ್ ಹೊಸದೇನಲ್ಲ. ಕೋಯಿ ಮಿಲ್ ಗಯಾ ಚಿತ್ರದಲ್ಲಿ ಬಾಲ ಕಲಾವಿದೆಯಾಗಿ ನಟಿಸುವ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದರು. ಇನ್ನೊಂದು ವಿಚಾರ ಏನೆಂದರೆ, ಹನ್ಸಿಕಾ ಮೂಲತಃ ಮುಂಬೈನವರು. ಕರೊನಾ ಲಾಕ್ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಕುಟುಂಬದ ಜತೆ ಕಾಲ ಕಳೆಯುತ್ತಿದ್ದಾರೆ.
ಇದನ್ನೂ ಓದಿ: ಕಂಗನಾ ಕ್ಷಮೆ ಕೇಳಿದ ಅನುರಾಗ್ ಕಶ್ಯಪ್ … ಯಾಕೆ?
ಇತ್ತೀಚಿನ ದಿನಗಳಲ್ಲಿ ದೇಹದ ತೂಕವನ್ನು ಕಡಿಮೆ ಮಾಡಿಕೊಂಡಿರುವ ಹನ್ಸಿಕಾ, ಲುಕ್ ಬದಲಿಸಿಕೊಂಡಿದ್ದಾರೆ. ಸದ್ಯ ನಾಯಕಿ ಪ್ರಧಾನ ‘ಮಹಾ’ ಸಿನಿಮಾದಲ್ಲಿ ಹನ್ಸಿಕಾ ನಟಿಸುತ್ತಿದ್ದಾರೆ. ಈಗಾಗಲೇ ಅದರ ಬಹುತೇಕ ಚಿತ್ರೀಕರಣವನ್ನು ಮುಗಿಸಿಕೊಂಡಿರುವ ಹನ್ಸಿಕಾ, ಶೀಘ್ರದಲ್ಲಿ ಇನ್ನುಳಿದ ಚಿತ್ರೀಕರಣವನ್ನೂ ಮುಗಿಸಿಕೊಡಲಿದ್ದಾರೆ. ಜತೆಗೆ ಬಾಲಿವುಡ್ನಲ್ಲಿಯೂ ಸಕ್ರಿಯರಾಗುವ ಸೂಚನೆ ನೀಡಿದ್ದಾರೆ. (ಏಜೆನ್ಸೀಸ್)