

ಇತ್ತೀಚೆಗಷ್ಟೇ ಕಂಗನಾ ಜತೆಗೆ ಜಗಳವಾಡಿದ್ದ ನಿರ್ದೇಶಕ ಅನುರಾಗ್ ಕಶ್ಯಪ್, ಈಗ ಆಕೆಯ ಕ್ಷಮೆ ಕೋರಿದ್ದಾರೆ. ಹಾಗಂತ ಅವರು ಕ್ಷಮೆ ಕೇಳುತ್ತಿರುವುದು ಈ ಜಗಳದ ಬಗ್ಗೆಯಲ್ಲ. ಕಳೆದ ವರ್ಷ, ತನ್ನಿಂದ ಕಂಗನಾಗೆ ನೋವಿಗಿರುವ ಬಗ್ಗೆ ಅವರು ಕ್ಷಮೆ ಕೇಳಿದ್ದಾರೆ.
ಇತ್ತೀಚೆಗೆ ಕಂಗನಾ ಮತ್ತು ತಾಪ್ಸಿ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಜಗಳಗಳಾಗಿವೆ. ತಾಪ್ಸಿ ಅವರನ್ನು ಬಿ-ಗ್ರೇಡ್ ನಟಿ ಎಂದು ಕಂಗನಾ ಕರೆದಿದ್ದಾರೆ. ಅನುರಾಗ್ಗೆ ಕಂಗನಾ ಮತ್ತು ತಾಪ್ಸಿ ಇಬ್ಬರೂ ಒಳ್ಳೆಯ ಸ್ನೇಹಿತರಂತೆ. ಹಾಗಾಗಿ ಅವರಿಬ್ಬರ ಮಧ್ಯೆ ರಾಜಿ ಮಾಡುವುದಕ್ಕೆ ಅನುರಾಗ್ ಪ್ರಯತ್ನಿಸಿದ್ದಾರೆ.
ಇದನ್ನೂ ಓದಿ: ಕನ್ನಡಿಗರಿಂದ ಕನ್ನಡಿಗರಿಗಾಗಿ ಹೊಸ ಓಟಿಟಿ …
ಈ ಸಂಬಂಧ ಕಂಗನಾಗೆ ಫೋನ್ ಮಾಡಿ, ವಿಷಯಗಳನ್ನು ಪರಸ್ಪರ ಕೂತು ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಆದರೆ, ಕಂಗನಾ ಆ ಎಲ್ಲಾ ವಿಷಯಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗಪಡಿಸಿದ್ದಾರೆ. ಇದರಿಂದ ಬೇಸರಗೊಂಡಿದ್ದ ಅನುರಾಗ್, ಕಂಗನಾ ಸಾಕಷ್ಟು ಬದಲಾಗಿದ್ದಾರೆ ಎಂದು ಹೇಳಿಕೊಂಡಿದ್ದರು. ತಮಗೆ ಗೊತ್ತಿದ್ದ ಕಂಗನಾನೇ ಬೇರೆ ಎಂದು ಹೇಳಿದ್ದರು.
ಎಲ್ಲಾ ಸರಿ, ಇಷ್ಟಕ್ಕೂ ಕಂಗನಾಗೆ ಯಾಗಿ ಅನುರಾಗ್ ಮತ್ತು ತಾಪ್ಸಿ ಬಗ್ಗೆ ಸಿಟ್ಟು ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಮೂಲಗಳ ಪ್ರಕಾರ, ಕಳೆದ ವರ್ಷ ನಡೆದ ಒಂದು ಘಟನೆಯಿಂದ ಕಂಗನಾಗೆ ಬೇಸರವಾಗಿದೆಯಂತೆ. ಅದೇ ಕಾರಣಕ್ಕೆ ತಾಪ್ಸಿ ಮತ್ತು ಅನುರಾಗ್ ಮೇಲೆ ಕಿಡಿ ಕಾರುತ್ತಿದ್ದಾರೆ ಅವರು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಇದು ಆಧುನಿಕ ರಾಮಾಚಾರಿಯ ಕಥೆ!
ಕಳೆದ ವರ್ಷ, ಅನುರಾಗ್ ತಮ್ಮ 'ಮನ್ಮರ್ಜಿಯಾನ್' ಚಿತ್ರದ ಬಿಡುಗಡೆ ಸಮಯದಲ್ಲಿ ತಾಪ್ಸಿ ಜತೆಗೆ ಒಂದು ಸಂದರ್ಶನದಲ್ಲಿ ಭಾಗವಹಿಸಿದ್ದಾರೆ. ಈ ಸಂದರ್ಶನದಲ್ಲಿ, ಕಂಗನಾಗೆ ಡಬ್ಬಲ್ ಫಿಲ್ಟರ್ ಬೇಕಾ ಎಂಬ ಪ್ರಶ್ನೆಗೆ, ತಾಪ್ಸಿ ಮತ್ತು ಅನುರಾಗ್ ಯಾವುದೇ ಉತ್ತರ ಕೊಡದೆ, ನಕ್ಕು ಸುಮ್ಮನಾಗಿದ್ದಾರೆ. ಈ ನಗು ಕಂಗನಾ ಅವರನ್ನು ಕೆರಳಿಸಿದೆ. ಅದೇ ಕಾರಣಕ್ಕೆ, ಕಂಗನಾ ಪದೇಪದೇ ತಾಪ್ಸಿ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರಂತೆ.
ಈ ಕುರಿತು ಮಾತನಾಡಿರುವ ಅನುರಾಗ್, 'ಕಂಗನಾ ವಿಷಯವಾಗಿ ಏನೂ ಮಾತಾಡಿಲ್ಲ. ಆದರೂ, ನನ್ನ ಬಗ್ಗೆ ಬೇಸರವಿದ್ದರೆ ಕ್ಷಮೆ ಕೇಳುತ್ತೇನೆ. ಸ್ನೇಹಿತರು ಮಾಡುವುದೇ ಅದನ್ನ. ಆದರೆ, ಕಂಗನಾ ಈಗ ಹೇಗಾಗಿದ್ದಾರೆಂದರೆ, ನೀವು ನನ್ನ ಪರವಾಗಿಲ್ಲದಿದ್ದರೆ, ನೀವು ನನ್ನ ವೈರಿಗಳು ಎನ್ನುವಂತೆ ಆಡುತ್ತಿದ್ದಾರೆ' ಎಂದು ಕಂಗನಾ ನಡೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ ಅನುರಾಗ್.