ಗುಡ್‌ಬೈ ಕರೊನಾ ... ಹಾಡಿನಲ್ಲೇ ವೈರಸ್ ಓಡಿಸಿದ ಹಂಸಲೇಖ

Hamsalekha
Published on

ಕರೊನಾ ವೈರಸ್ ವಿರುದ್ಧ ಜಾಗೃತಿ ಮೂಡಿಸುವುದಕ್ಕೆ ಇತ್ತೀಚೆಗೆ ಜಯಂತ್ ಕಾಯ್ಕಿಣಿ ಒಂದು ಹಾಡು ಬರೆದಿದ್ದರು. ಆ ಹಾಡನ್ನು ಹಿರಿಯ ಗಾಯಕ ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಿಂದ ಹಾಡಿಸಿದ್ದರು. ಅದಲ್ಲದೆ ಕರೊನಾ ವಿರುದ್ಧ ಜಾಗೃತಿ ಮೂಡಿಸುವುದಕ್ಕೆ ಕನ್ನಡ ಚಿತ್ರರಂಗದ ಹಲವು ಚಿತ್ರಸಾಹಿತಿಗಳು ಕರೊನಾ ಕುರಿತು ಗೀತೆಗಳನ್ನು ರಚಿಸಿದ್ದಾರೆ. ಈಗ ಹಂಸಲೇಖ ಸಹ ಆ ಸಾಲಿಗೆ ಸೇರಿದ್ದಾರೆ.

ಯಾವುದೇ ವಿಷಯ ಕೊಟ್ಟರೂ ಅದ್ಭುತವಾಗಿ ಹಾಡು ಬರೆಯಬಲ್ಲ ಹಂಸಲೇಖ ಅವರು, ಇದೀಗ ಕರೊನಾ ಕುರಿತು ಒಂದು ಹಾಡು ರಚಿಸಿದ್ದಾರೆ. ಅಷ್ಟೇ ಅಲ್ಲ, ಅದಕ್ಕೆ ಅವರೇ ಸಂಗೀತ ಸಂಯೋಜಿಸಿದ್ದು, ಆ ಹಾಡನ್ನು ಪತ್ನಿ ಲತಾ ಹಂಸಲೇಖ ಮತ್ತು ಮಗಳು ನಂದಿನಿ ಅವರಿಂದ ಹಾಡಿಸಿದ್ದಾರೆ. ಜತೆಗೆ ಗಾಯನದಲ್ಲೂ ಜತೆಯಾಗಿದ್ದಾರೆ. ಈ ಹಾಡು ಇದೀಗ ಯೂಟ್ಯೂಬ್‌ನಲ್ಲಿ ಲಭ್ಯವಿದ್ದು, ಕೇಳುಗರಿಗೆ ಇಷ್ಟವಾಗಿದೆ.

‘ಬಾಯ್ ಬಾಯ್ ಕರೊನಾ, ನೀನು ಹೋಗಲೇಬೇಕಿದೆ, ಗುಡ್‌ಬೈ ಕರೊನಾ, ನಿನಗೆ ಬೇರೆ ದಾರಿ ಏನಿದೆ ...’ ಎಂದು ಸಾಗುವ ಈ ಹಾಡಿನ ಕುರಿತು ಮಾತನಾಡಿರುವ ಅವರು, ‘ಮಕ್ಕಳೇ ಭಯಪಡಬೇಡಿ. ಕರೊನಾ ಒಂದು ಕ್ರಿಮಿ. ಆ ತರಹ ವೈರಸ್‌ಗಳು ಭೂಮಿಗೆ ಅದೆಷ್ಟೋ ಬಂದು ಹೋಗಿವೆ. ಇದು ಸಹ ಬಂದು ಹೋಗತ್ತೆ. ಹಾಗಾಗಿ ಹೆದರಬೇಡಿ. ಕರೊನಾಗೆ ಸೆಂಡ್‌ಆಫ್​ ಮಾಡೋಣ, ಬೈ ಬೈ ಹೇಳಿ’ ಎಂದು ಎಲ್ಲರಿಗೂ ಧೈರ್ಯ ತುಂಬಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net