ಕರೊನಾ ಹಾಡು; ಜಯಂತ ಕಾಯ್ಕಿಣಿ ಸಾಹಿತ್ಯಕ್ಕೆ ಎಸ್‌ಪಿಬಿ ಧ್ವನಿ

Untitled
Published on

ಬೆಂಗಳೂರು: ಈಗಾಗಲೇ ಕರೊನಾ ಮಹಾಮಾರಿಯ ಬಗ್ಗೆ ಅನೂಪ್ ಸೀಳಿನ್ ಹಾಡೊಂದನ್ನು ಕಂಪೋಸ್ ಮಾಡಿ ಧ್ವನಿಯನ್ನೂ ನೀಡಿದ್ದರು. ಅದೇ ರೀತಿ ಡಾ. ವಿ. ನಾಗೇಂದ್ರ ಪ್ರಸಾದ್ ಸಹ ಕರೊನಾ ಕುರಿತು ಹಾಡೊಂದನ್ನು ರಚಿಸಿದ್ದರು. ಈಗ ಜಯಂತ್ ಕಾಯ್ಕಿಣಿ ಸರದಿ. ಹೌದು, ‘ಕಾಣದಂತೆ ಆಕ್ರಮಿಸಿದೆ ವೈರಿ ಕರೊನಾ.. ಅದಕ್ಕೆ ನಾವೀಗ ದಾರಿ ಆಗದಿರೋಣ.. ಕಾಲಬುಡಕೆ ಬರುವ ತನಕ ಕಾಯದಿರೋಣ.. ನಾವೇ ಇಂದು ನಮಗೊಂದು ಅವಕಾಶ ಕೊಡೋಣ..’ ಎಂಬ ಹಾಡಿಗೆ ಜಯಂತ ಸಾಹಿತ್ಯ ಬರೆದಿದ್ದು, ಅದಕ್ಕೆ ಖ್ಯಾತ ಹಿರಿಯ ಗಾಯಕ ಎಸ್‌ಪಿ ಬಾಲಸುಬ್ರಮಣ್ಯ ಧ್ವನಿಯಾಗಿದ್ದಾರೆ. ಆ ಹಾಡಿನಲ್ಲಿ ಮತ್ತೆ ಏನೆಲ್ಲ ಇದೆ ಎಂಬುದಕ್ಕೆ ಹಾಡಿನ ಲಿಂಕ್ ಇಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net