ಭಾರತದಿಂದ ಆಸ್ಕರ್​ಗೆ ಆಯ್ಕೆ ಆಯ್ತು ಗುಜರಾತಿ ಸಿನಿಮಾ..

Last Film Show
Published on

ನವದೆಹಲಿ: 2023ರ ಆಸ್ಕರ್ಸ್​ ಭಾರತದಿಂದ ಗುಜರಾತಿ ಸಿನಿಮಾ ಆಯ್ಕೆ ಆಗಿದೆ. ಗುಜರಾತಿ ಸಿನಿಮಾ 'ಚೆಲ್ಲೋ ಶೋ' ಭಾರತದಿಂದ ಆಸ್ಕರ್​​ಗೆ ಪ್ರವೇಶಿಸಿದ ಸಿನಿಮಾ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಇಂಗ್ಲಿಷ್​ನಲ್ಲಿ ಈ ಚಿತ್ರದ ಶೀರ್ಷಿಕೆ, 'ಲಾಸ್ಟ್ ಫಿಲ್ಮ್​ ಶೋ'.

ಫಿಲ್ಮ್​ ಫೆಡರೇಷನ್​ ಆಫ್ ಇಂಡಿಯಾ 2023ರ ಆಸ್ಕರ್​ಗೆ ಭಾರತದಿಂದ ಗುಜರಾತಿ ಸಿನಿಮಾ ಚೆಲ್ಲೋ ಶೋ ಆಯ್ಕೆ ಆಗಿದೆ ಎಂಬುದಾಗಿ ಘೋಷಿಸಿದೆ. 95ನೇ ಅಕಾಡೆಮಿ ಅವಾರ್ಡ್ಸ್​ನ ಬೆಸ್ಟ್​ ಇಂಟರ್​ನ್ಯಾಷನಲ್ ಫೀಚರ್ ಫಿಲ್ಮ್ ಕೆಟಗರಿಯಲ್ಲಿ ಈ ಸಿನಿಮಾ ಪ್ರದರ್ಶನಗೊಳ್ಳಲಿದೆ.

ಪಾನ್ ನಳಿನ್ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಭವಿನ್​ ರಬರಿ, ಭವೇಶ್ ಶ್ರಿಮಲಿ, ರಿಚಾ ಮೀನಾ, ದೀಪೆನ್ ರಾವಲ್, ಪರೇಶ್ ಮೆಹ್ತ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ರಾಯ್​ ಕಪೂರ್ ಫಿಲ್ಸ್ಮ್​ ಮತ್ತು ಆರೆಂಜ್​ ಸ್ಟುಡಿಯೊದಿಂದ ನಿರ್ಮಾಣಗೊಂಡಿರುವ ಈ ಸಿನಿಮಾ ಅ. 14ರಂದು ತೆರೆ ಕಾಣಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net