

ನವದೆಹಲಿ: ಸಿನಿಮಾ ಶೂಟಿಂಗ್ನಿಂದ ಕೊಂಚ ಬಿಡುವು ಮಾಡಿಕೊಂಡು ರಜೆಯ ಮಜಾ ಸವಿಯಲು ಮಾಲ್ಡೀವ್ಸ್‌ಗೆ ಹಾರಿದ್ದ ಚರಿಷ್ಮಾ ಸುಂದರಿ ರಶ್ಮಿಕಾ ಮಂದಣ್ಣ, ಇದೀಗ ತಮ್ಮ ಪ್ರವಾಸ ಮುಗಿಸಿ ಭಾರತಕ್ಕೆ ಮರಳಿದ್ದಾರೆ. ಆದರೆ, ರಶ್ಮಿಕಾ ಅವರು ಕೆಲವರಿಗೆ ತುಂಬಾ ಬೇಸರ ಉಂಟು ಮಾಡಿರುವುದಂತೂ ಸತ್ಯ.
ಬಾಲಿವುಡ್, ಟಾಲಿವುಡ್, ಕಾಲಿವುಡ್, ಸ್ಯಾಂಡಲ್ವುಡ್ನ ಸಾಕಷ್ಟು ಸೆಲೆಬ್ರಿಟಿಗಳು ಆಗಾಗ ಮಾಲ್ಡೀವ್ಸ್‌ಗೆ ಭೇಟಿ ನೀಡುತ್ತಿರುತ್ತಾರೆ. ನೀಲಾಕಾಶದ ನಡುವೆ ತಿಳಿ ನೀಲಿ ನೀರಿನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡು ಅಭಿಮಾನಿಗಳ ಬಿಸಿ ಹೆಚ್ಚಿಸುತ್ತಿರುತ್ತಾರೆ. ಈ ಮಾಲ್ಡೀವ್ಸ್ ಸೆಲೆಬ್ರಿಟಿಗಳ ನೆಚ್ಚಿನ ತಾಣ ಅಂದರೆ ತಪ್ಪಾಗಲಾರದು. ಅದರಲ್ಲೂ ನಟಿಯರಿಗಂತೂ ಸ್ವರ್ಗವೇ ಸರಿ. ಕಡಲ ಕಿನಾರೆಯಲ್ಲಿ ಮೈಚಳಿ ಬಿಟ್ಟು ಮಿಂದೇಳುತ್ತಾರೆ. ಬಿಕಿನಿ ಧರಿಸಿ ಬೋಲ್ಡ್ ಅವತಾರದಲ್ಲಿ ಕ್ಯಾಮೆರಾಗೆ ಪೋಸ್ ನೀಡುತ್ತಾರೆ. ಅದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಪಡ್ಡೆ ಹುಡುಗರ ಮೈ ಬಿಸಿಯೇರಿಸುತ್ತಾರೆ.
ಈಗಾಗಲೇ ದಿಶಾ ಪಟಾಣಿ, ರಾಕುಲ್ ಪ್ರೀತ್, ಸಮಂತಾ ಅಕ್ಕಿನೇನಿ, ಕಾಜಲ್ ಅಗರ್ವಾಲ್, ಕನ್ನಡದ ಪ್ರಣೀತಾ ಸುಭಾಷ್, ವೇದಿಕಾ, ಮಾಳವಿಕಾ ಮೋಹನನ್, ಅನುಷ್ಕಾ ಶರ್ಮಾ, ತಮ್ಮನ್ನಾ, ಪೂಜಾ ಹೆಗ್ಡೆ, ರೆಬಾ ಮೋನಿಕಾ ಜಾನ್, ಆಲಿಯಾ ಭಟ್, ಶಾನ್ವಿ ಶ್ರೀವಾತ್ಸವ, ಸೋನಾಕ್ಷಿ ಸಿನ್ಹಾ ಸೇರಿದಂತೆ ಬಹುತೇಕ ನಟಿಯರು ಮಾಲ್ಡೀವ್ಸ್ನಲ್ಲಿ ಮೋಜು ಮಸ್ತಿ ಮಾಡಿ ಬಂದಿದ್ದಾರೆ. ಅಲ್ಲಿ ಸೆರೆಹಿಡಿದ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂಗಳಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಬಿಕಿನಿ ಫೋಟೋಗಳೇ ಹೆಚ್ಚಿದ್ದವು.
ರಶ್ಮಿಕಾ ಮಂದಣ್ಣ ಸಹ ಬಿಕಿನಿ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಅನೇಕರು ಆಸೆ ಇಟ್ಟುಕೊಂಡಿದ್ದರು. ಆದರೆ, ಅವರ ಆಸೆ ನಿರಾಸೆಯಾಗಿದೆ. ಈಗಾಗಲೇ ರಶ್ಮಿಕಾ ಅವರು ಹೈದರಾಬಾದ್ಗೆ ಬಂದಿಳಿದಿದ್ದಾರೆ. ಕಡಲ ಕಿನಾರೆಯಲ್ಲಿ ತೆಗೆದು ಒಂದೆರೆಡು ಫೋಟೋಗಳನ್ನು ಬಿಟ್ಟರೆ, ರಶ್ಮಿಕಾ ಅವರು ತುಂಬಾ ಹಾಟ್ ಆಗಿ ಕಾಣಿಸಿಕೊಂಡಿಲ್ಲ. ಮಾಲ್ಡೀವ್ಸ್ ಪ್ರವಾಸ ಅಂದ ಮೇಲೆ, ಬಿಕಿನಿ ಫೋಟೋ ಇಲ್ಲದೆ ಯಾವೊಬ್ಬ ನಟಿ ಹಿಂದಿರುಗುವುದಿಲ್ಲ ಎಂಬ ಮಾತಿದೆ. ಆದರೆ, ರಶ್ಮಿಕಾ ಆ ಮಾತನ್ನು ಸುಳ್ಳು ಮಾಡಿದ್ದು, ಹಲವರಿಗೆ ನಿರಾಸೆಯನ್ನು ಉಂಡು ಮಾಡಿದ್ದಾರೆ.
ಅಂದಹಾಗೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಇಬ್ಬರೂ ಬಾಲಿವುಡ್ ಮ್ಯಾಗಜಿನ್ ಒಂದರ ಕವರ್ ಪೇಜ್‌ಗಾಗಿ ಫೋಟೋಶೂಟ್ ಮಾಡಿಸಿದ್ದಾರೆ ಎಂಬ ವರದಿಯೊಂದು ಹರಿದಾಡುತ್ತಿದೆ. ಇಬ್ಬರು ಮಾಲ್ಡೀವ್ಸ್‌ಗೆ ಒಟ್ಟಿಗೆ ಹಾರಲು ಇದು ಸಹ ಮುಖ್ಯ ಕಾರಣವಾಗಿದೆ ಎನ್ನಲಾಗುತ್ತಿದೆ. ಮ್ಯಾಗಜಿನ್‌ಗಾಗಿ ಬಿಕಿನಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ತಿಳಿದಿಲ್ಲ ಆದರೆ, ಮಾಲ್ಡೀವ್ಸ್ ಹಾರಿದ್ದ ರಶ್ಮಿಕಾರಿಂದ ಕೆಲವರು ಬಿಕಿನಿ ಫೋಟೋಗಳನ್ನು ನಿರೀಕ್ಷೆ ಮಾಡಿದ್ದಂತೂ ಸುಳ್ಳಲ್ಲ.
ಅಂದಹಾಗೆ ನಟಿಯರಿಗೆ ಮಾಲ್ಡೀವ್ಸ್ ಉಚಿತ ಪ್ರವಾಸದ ಸೌಲಭ್ಯವಿದೆ ಎನ್ನಲಾಗುತ್ತಿದೆ. ನಟಿಯರು ಬಿಕಿನಿ ಉಡುಗೆಯಲ್ಲಿ ಪೋಸ್ ನೀಡಿ, ಫೋಟೋಗಳನ್ನು ಜಾಲತಾಣದಲ್ಲಿ ಪೋಸ್ಟ್ ಮಾಡಿದರೆ, ಅದಕ್ಕೆ ಪ್ರತಿಯಾಗಿ, ನಟಿಯರಿಗೆ ಮಾಲ್ಡೀವ್ಸ್ನಲ್ಲಿ ಉಚಿತ ಪ್ರವಾಸ ದೊರೆಯುತ್ತಿದೆಯಂತೆ. ಇದೊಂದು ರೀತಿಯ ಪಾವತಿಸಿದ ಪ್ರಚಾರದ ಭಾಗವಾಗಿದೆ. ನಟಿಯರ ಮೂಲಕ ಮಾಲ್ಡೀವ್ಸ್ ತನ್ನ ಪ್ರವಾಸೋದ್ಯಮವನ್ನು ಪ್ರಚಾರ ಮಾಡುತ್ತಿದೆ ಎಂದು ಸುದ್ದಿಯು ಇದೆ. (ಏಜೆನ್ಸೀಸ್)