ಗುಂಡನ ಭಾವುಕ ಜಗತ್ತನ್ನು ಮೆಚ್ಚಿಕೊಂಡ ಜನ

Gunda
Published on

ಬೆಂಗಳೂರು: ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ ಆರ್ ಪೇಟೆ ನಾಯಕರಾಗಿ ನಟಿಸಿದ್ದ ನಾನು ಮತ್ತು ಗುಂಡ ಎರಡನೇ ವಾರಕ್ಕೆ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಜನರ ಪ್ರತಿಕ್ರಿಯೆ ಕಂಡು ಚಿತ್ರತಂಡ ಖುಷಿ ವ್ಯಕ್ತಪಡಿಸಿದೆ. ಸಂತೋಷಕೂಟದಲ್ಲಿ ಮಾತನಾಡಿದ ನಿರ್ದೇಶಕ ಶ್ರೀನಿವಾಸ್​ತಮಯ್ಯ ‘ಸಿನಿಮಾದ ಭಾವುಕ ಅಂಶಗಳು ಎಲ್ಲರನ್ನು ಸೆಳೆದಿದೆ.

ಪ್ರಾಣಿ ಗುಣಗಳನ್ನು ತಿಳಿದುಕೊಂಡವರಿಗೆ ಚಿತ್ರ ಮತ್ತಷ್ಟು ಆಪ್ತವಾಗಿರುವುದು, ಹಾಸನ ಭಾಷೆಯ ಸೊಗಡು, ಜತೆಗೆ ಶಿವರಾಜ್ ಕೆ ಆರ್ ಪೇಟೆ ಅವರ ನಟನೆ ಚಿತ್ರವನ್ನು ಗೆಲ್ಲುವಂತೆ ಮಾಡಿದೆ. ಪತ್ರಿಕೆಗಳಲ್ಲಿ ಸಿನಿಮಾ ರಿವ್ಯೂ ನೋಡಿ ನಾನು ಹತ್ತು ವರ್ಷ ಕಾದಿದ್ದಕ್ಕೂ ಸಾರ್ಥಕವಾಯಿತು ಎನಿಸಿತು’ಎಂದರು. ಸಂಗೀತ ನಿರ್ದೇಶಕ ಕಾರ್ತಿಕ್ ಶರ್ಮಾ ಮಾತನಾಡಿ ‘ಬಿಡುಗಡೆ ಮುಂಚೆ ಸಂಗೀತದ ಬಗ್ಗೆ ಹೇಳಿಕೊಳ್ಳುವುದಕ್ಕಿಂತ ಜನ ನೋಡಲಿ ಎಂದು ಸುಮ್ಮನಿದ್ದೆ, ಈಗ ಚಿತ್ರದ ಸಂಗೀತ ಎಲ್ಲರಿಗೂ ಇಷ್ಟವಾಗಿದೆ ಹಾಗಾಗಿ ನನ್ನ ಕೆಲಸದ ಬಗ್ಗೆ ನನಗೆ ಖುಷಿಯಿದೆ ಎಂದು ಹೇಳಿದರು.

‘ಕೆಲ ಚಿತ್ರಮಂದಿರದಿಂದ ಸಿನಿಮಾಗಾಗಿ ಬೇಡಿಕೆ ಸೃಷ್ಟಿಯಾಗಿದೆ. ಹಾಡುಗಳು, ಕ್ಲೈಮ್ಯಾಕ್ಸ್ ಎಲ್ಲರನ್ನು ಸೆಳೆದಿದೆ. ಎಲ್ಲರೂ ಸೇರಿ ಸಿನಿಮಾವನ್ನು ಸಕ್ಸಸ್ ಮಾಡಿರುವುದಕ್ಕೆ ಬಹಳ ಖುಷಿ ಇದೆ ಎಂದು ನಾಯಕ ನಟ ಶಿವರಾಜ್ ಕೆ ಆರ್ ಪೇಟೆ ಹೇಳಿದರು. ‘ಮಲ್ಟಿಪ್ಲೆಕ್ಸ್, ಸಿಂಗಲ್ ಸ್ಕಿŠೕನ್​ಗಳು ಶೇಕಡ 70ರಷ್ಟು ಭರ್ತಿಯಾಗುತ್ತಿದೆ. ಹೀಗೆ ಮುಂದುವರೆದರೆ ಎರಡನೆ ವಾರಕ್ಕೆ ಬಂಡವಾಳ ವಾಪಸ್ಸು ಬರುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು ನಿಮಾಪಕ ರಘುಹಾಸನ್. ಕತೆಗಾರ ವಿವೇಕಾನಂದ ತಂಜುರಾಯರ್, ಸಂಭಾಷಣೆಕಾರ ಶರತ್​ಚಕ್ರವರ್ತಿ, ಸೌಂಡ್ ಇಂಜಿನಿಯರ್ ನವೀನ್, ನಟ ಗೋವಿಂದೇಗೌಡ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net