ಭಜರಂಗಿ 2 ಸಿನಿಮಾ ಟ್ರೇಲರ್​ಗೆ ಮೆಚ್ಚುಗೆ

Bhajarangi 2
Published on

ಎ. ಹರ್ಷ ನಿರ್ದೇಶನದಲ್ಲಿ ಮೂಡಿಬಂದಿರುವ ಬಹುನಿರೀಕ್ಷಿತ ‘ಭಜರಂಗಿ 2’ ಚಿತ್ರದ ಟ್ರೇಲರ್ ಬುಧವಾರ ಬಿಡುಗಡೆ ಆಗಿದೆ. ದೃಶ್ಯಾವಳಿಗಳ ಮೂಲಕವೇ ಚಿತ್ರವನ್ನು ಮತ್ತೊಂದು ಹಂತಕ್ಕೆ ನಿರ್ದೇಶಕರು ಕೊಂಡೊಯ್ದಿದ್ದಾರೆ. ಸಂಭಾಷಣೆಗಳ ಬದಲಿಗೆ ಚಿತ್ರದಲ್ಲಿನ ಪ್ರಮುಖ ಪಾತ್ರಗಳನ್ನು 3 ನಿಮಿಷ 14 ಸೆಕೆಂಡ್​ಗಳಲ್ಲಿ ತೋರಿಸಿದ್ದಾರೆ.

ಕನ್ನಡದ ಜತೆಗೆ ತೆಲುಗಿನಲ್ಲಿಯೂ ಈ ಸಿನಿಮಾ ಬಿಡುಗಡೆ ಆಗಲಿದ್ದು, ಜಯಣ್ಣ ಫಿಲಂಸ್ ಬ್ಯಾನರ್​ನಲ್ಲಿ ಚಿತ್ರ ನಿರ್ವಣವಾಗಿದೆ. ಭಾವನಾ ಮೆನನ್, ಶ್ರುತಿ, ಲೋಕಿ ಸೇರಿ ಹಲವರು ಚಿತ್ರದಲ್ಲಿದ್ದಾರೆ. ಇದೇ 29ಕ್ಕೆ ಬಿಡುಗಡೆ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net