

‘ಕೆಜಿಎಫ್ ಚಾಪ್ಟರ್ 2’ ಬಿಡುಗಡೆಗೆ ಒಂದೂವರೆ ತಿಂಗಳಷ್ಟೇ ಉಳಿದಿದೆ. ಬಿಡುಗಡೆ ದಿನಾಂಕ ಹತ್ತಿರ ಬರುತ್ತಿದ್ದಂತೆ, ಅಭಿಮಾನಿ ವಲಯದಲ್ಲಿನ ಕುತೂಹಲವೂ ದುಪ್ಪಟ್ಟಾಗಿದೆ. ಅದರ ಜತೆಗೆ ಚಿತ್ರದ ಹಾಡುಗಳು ಅಥವಾ ಟ್ರೇಲರ್ ಬಗ್ಗೆ ಸಣ್ಣ ಸುಳಿವಿಲ್ಲವಲ್ಲ ಎಂಬ ಬೇಸರವೂ ಇದೆ. ಹೀಗಿರುವಾಗಲೇ, ತಂಡದಿಂದ ಹೊಸ ಸುದ್ದಿಯೊಂದು ಹೊರಬಂದಿದೆ.
ಹೌದು, ಸಿನಿಮಾ ಬಿಡುಗಡೆಗೆ 50 ದಿನ ಬಾಕಿ ಇದೆ ಎನ್ನುವಷ್ಟರಲ್ಲಿ ‘ಕೆಜಿಎಫ್’ ತಂಡ ಪ್ರಚಾರ ಕಣಕ್ಕೆ ಧುಮುಕಿದೆ. ಪ್ರೇಕ್ಷಕನಿಗೆ ಏನು ಬೇಕು ಎಂಬುದನ್ನು ತಿಳಿದು ಅದನ್ನೇ ಕೊಡಲು ಮನಸ್ಸು ಮಾಡಿದೆ. ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ತಾಣದಲ್ಲಿ ಆಯ್ಕೆಗಳನ್ನು ನೀಡಿದೆ.
ಅದರಲ್ಲಿ ಹಾಡು, ಟ್ರೇಲರ್, ಇವೆರಡೂ ಅಲ್ಲದೆ ಇನ್ನೇನೋ ವಿಶೇಷ ... ಈ ಮೂರು ಆಯ್ಕೆಗಳಲ್ಲಿ ಪ್ರೇಕ್ಷಕರಿಗೆ ಯಾವುದು ಬೇಕಿದೆಯೋ ಅದನ್ನು ಕೊಡಲು ಚಿತ್ರತಂಡ ನಿರ್ಧರಿಸಿದೆ. ಈ ಮೂರರ ಪೈಕಿ ಶೇ. 74ರಷ್ಟು ಜನ ಟ್ರೇಲರ್ಗೆ ವೋಟ್ ಮಾಡಿದ್ದಾರೆ. ಆ ಬೇಡಿಕೆಯನ್ನು ತಂಡ ಈಡೇರಿಸಲಿದೆಯೇ? ಅದು ಯಾವಾಗ? ಎಂಬುದಕ್ಕೆ ಇನ್ನಷ್ಟು ದಿನ ಕಾಯಲೇಬೇಕು.