ಗಿಣಿರಾಮ ಧಾರಾವಾಹಿಯಿಂದ ಮಹತಿ ಔಟ್​?! ಅಷ್ಟಕ್ಕೂ ಆಗಿದ್ದೇನು ಗೊತ್ತಾ?

ginirama
Published on

ಬೆಂಗಳೂರು: ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗಿಣಿರಾಮ ಧಾರಾವಾಹಿ ಅಭಿಮಾನಿಗಳಿಗೆ ಸಣ್ಣದೊಂದು ಶಾಕ್​ ಎದುರಾಗಿದೆ. ನೆಚ್ಚಿನ ಜೋಡಿಯನ್ನು ತೆರೆ ಮೇಲೆ ಕಾಣುತ್ತಿದ್ದವರಿಗೆ ಇನ್ನು ಕೆಲ ದಿನಗಳ ಕಾಲ ಮಹತಿ ಕಾಣಸಿಗುವುದಿಲ್ಲ.

ಹೌದು! ಮಹತಿ ಪಾತ್ರದಲ್ಲಿ ನಟಿಸುತ್ತಿರುವ ನಟಿ ನಯನಾಗೆ ಕರೊನಾ ಸೋಂಕು ದೃಢವಾಗಿದೆ. ಈ ಬಗ್ಗೆ ಅವರೇ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನನಗೆ ಕರೊನಾ ಸೋಂಕು ದೃಢವಾಗಿದೆ. ಹೆದರಬೇಕಾಗಿರುವುದೇನಿಲ್ಲ. ಮನೆಯಲ್ಲೇ ಇರುತ್ತೇನೆ. 15 ದಿನಗಳ ಕಾಲ ಕ್ವಾರಂಟೈನ್​ ಆಗಿ ಚಿಕಿತ್ಸೆ ಪಡೆಯಲಿದ್ದೇನೆ. ಧಾರಾವಾಹಿ ಸೆಟ್​ಗೆ ಕೆಲ ದಿನಗಳ ಕಾಲ ಹೋಗಲಾಗುವುದಿಲ್ಲ. ಆದ್ದರಿಂದ ಸ್ಕ್ರಿಪ್ಟ್​ನಲ್ಲಿ ಕೊಂಚ ಬದಲಾವಣೆ ಆಗುವ ಸಾಧ್ಯತೆಯಿದೆ ಎಂದು ಅವರು ಬರೆದುಕೊಂಡಿದ್ದಾರೆ.

ಶೀಘ್ರ ಗುಣಮುಖವಾಗಿ ಆದಷ್ಟು ಬೇಗ ಧಾರಾವಾಹಿ ಸೆಟ್​ಗೆ ಮರಳುತ್ತೇನೆ ಎಂದು ಕೂಡ ಅವರು ಬರೆದುಕೊಂಡಿದ್ದಾರೆ.

ರಾಜ್ಯದಲ್ಲಿ ಕರೊನಾ ಸೋಂಕಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಸೋಂಕು ನಿಯಂತ್ರಣಕ್ಕೆ ಸರ್ಕಾರ ಸಕಲ ಪ್ರಯತ್ನಗಳನ್ನು ಮಾಡುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net