ಮೇಕಪ್ ಅಭ್ಯಾಸಕ್ಕೆ ಮಗಳೇ ಮಾಡಲ್ ... ‘ಕಿಂಗ್ ಖಾನ್’ ಪತ್ನಿಯ ಹೊಸ ಹವ್ಯಾಸ

Suhana Khan
Published on

ಕರೊನಾದಿಂದ ಇಡೀ ದೇಶವೇ ಲಾಕೌಟ್ ಆಗಿರುವುದರಿಂದ, ಸೆಲೆಬ್ರಿಟಿಗಳಿಗೆ ಏನು ಮಾಡಬೇಕು ಎಂಬುದೇ ಅರ್ಥವಾಗುತ್ತಿಲ್ಲ. ಅದರಲ್ಲೂ ಬಾಲಿವುಡ್‌ನಲ್ಲಿ ಸೆಲೆಬ್ರಿಟಿಗಳಿಗೆ ಟೈಂಪಾಸ್ ಮಾಡಲಾಗದೆ ಒದ್ದಾಡುತ್ತಿದ್ದಾರೆ. ಕೆಲವು ವರ್ಕೌಟ್ ಮಾಡಿದರೆ, ಇನ್ನೂ ಕೆಲವರು ಪಾತ್ರೆ ತೊಳೆಯುತ್ತಿದ್ದಾರೆ. ಕೆಲವರು ಪುಸ್ತಕ ಹಿಡಿದರೆ, ಇನ್ನೂ ಕೆಲವರು ಮನೆ ಕ್ಲೀನ್ ಮಾಡಿಕೊಳ್ಳುತ್ತಿದ್ದಾರೆ.

ಇಂಥ ಸಂದರ್ಭದಲ್ಲಿ ‘ಕಿಂಗ್ ಖಾನ್’ ಎಂದೇ ಖ್ಯಾತರಾಗಿರುವ ಶಾರೂಖ್ ಖಾನ್ ಅವರ ಪತ್ನಿ ಗೌರಿ ಖಾನ್ ಏನು ಮಾಡುತ್ತಿದ್ದಾರೆ ಗೊತ್ತಾ? ಮುಂಬೈನಲ್ಲಿ ಹೆಸರಾಂತ ಇಂಟೀರಿಯರ್ ಡಿಸೈನರ್ ಆಗಿರುವ ಅವರು, ಆ ಕೆಲಸವನ್ನು ಸ್ವಲ್ಪ ಬದಿಗೊತ್ತಿ, ಇದೀಗ ಮೇಕಪ್ ಅಭ್ಯಾಸ ಮಾಡುತ್ತಿದ್ದಾರೆ. ಅದೂ ಯಾರ ಮೇಲೆ ಗೊತ್ತಾ? ಮಗಳು ಸುಹಾನಾ ಮೇಲೆ.

ಇತ್ತೀಚೆಗೆ ಬ್ರಶ್ ಹಿಡಿದು ಮೇಕಪ್ ಮಾಡಿ, ಮಗಳನ್ನು ಇನ್ನಷ್ಟು ಚಂದಗಾಣಿಸಿದ್ದಾರೆ ಗೌರಿ ಖಾನ್. ಅಮ್ಮ ಮಾಡಿದ ಮೇಕಪ್‌ನಲ್ಲಿ ಮಿಂಚುತ್ತಿರುವ ಸುಹಾನಾ, ಆ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್ ಮೂಲಕ ಹಂಚಿಕೊಂಡಿದ್ದಾರೆ. ಇದುವರೆಗೂ ಒಂದೇ ಒಂದು ಚಿತ್ರದಲ್ಲೂ ನಟಿಸದ ಸುಹಾನಾ, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಜನಪ್ರಿಯರಾಗಿದ್ದಾರೆ. ಅದೇ ಕಾರಣಕ್ಕೆ ಅವರು ಶೇರ್ ಮಾಡಿದ ಫೋಟೋಗಳಿಗೆ ಸಿಕ್ಕಾಪಟ್ಟೆ ಲೈಕು, ಕಮೆಂಟುಗಳು ಸಿಕ್ಕಿವೆ. ಅದೆಲ್ಲಕ್ಕಿಂತ ಹೆಚ್ಚಾಗಿ, ಆಕೆ ಅಪ್ಪನ ತರಹವೇ ಚಿತ್ರರಂಗಕ್ಕೆ ಬರುತ್ತಾರಾ? ನಟನೆ ಮಾಡುತ್ತಾರಾ? ಎಂಬ ಕುತೂಹಲ ಎಲ್ಲರಲ್ಲೂ ಹೆಚ್ಚಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net