ಸೈಕೆಡೆಲಿಕ್​ ನಿಶಾ ; ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ "ಗಟ್ಟಿಮೇಳ' ಹುಡುಗಿ

zxc zx z
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ಕೆಲ ದಿನಗಳ ಹಿಂದಷ್ಟೇ "ನಮ್ಮನೆ ಯುವರಾಣಿ', "ಮಂಗಳಗೌರಿ ಮದುವೆ' ಧಾರಾವಾಹಿಗಳ ಖ್ಯಾತಿಯ ನಟಿ ಅಂಕಿತಾ ಅಮರ್​, "ಇಬ್ಬನಿ ತಬ್ಬಿದ ಇಳೆಯಲಿ' ಚಿತ್ರದ ಮೂಲಕ ಕಿರುತೆರೆಯಿಂದ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದು ಗೊತ್ತಿದೆ. ಅವರ ಬೆನ್ನಲ್ಲೇ ಮತ್ತೊಬ್ಬ ಕಿರುತೆರೆ ನಟಿ "ಗಟ್ಟಿಮೇಳ' ಖ್ಯಾತಿಯ ನಿಶಾ ರವಿಕೃಷ್ಣನ್​ ಕೂಡ ಸ್ಮಾಲ್​ ಸ್ಕ್ರೀನ್​ನಿಂದ ಸಿಲ್ವರ್​ ಸ್ಕ್ರೀನ್​ಗೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದ ಹೆಸರು "ಅಂಶು'.

ಇದು ಮಹಿಳಾ ಪ್ರಧಾನ ಸೈಕೆಡೆಲಿಕ್​ ಥ್ರಿಲ್ಲರ್​ ಜಾನರ್​ ಚಿತ್ರವಾಗಿದ್ದು, ಎಂ.ಸಿ. ಚನ್ನಕೇಶವ ನಿರ್ದೇಶಿಸುತ್ತಿದ್ದಾರೆ. ಅಂದಹಾಗೆ ಸೈಕೆಡೆಲಿಕ್​ ಎಂದರೆ ಭ್ರಮೆ ಉಂಟು ಮಾಡುವ ಅಥವಾ ಮನೋವಿಕೃತ ಎಂದರ್ಥ. ಪ್ರಸ್ತುತ ಸಮಾಜದಲ್ಲಿ ಟಿಸುತ್ತಿರುವ ವಿಚಾರಗಳೇ ಚಿತ್ರಕ್ಕೆ ಸ್ಪೂರ್ತಿಯಾಗಿದ್ದು, ಅದನ್ನು ಕಮರ್ಷಿಯಲ್​ ಆಗಿ ಹೇಳುವ ಪ್ರಯತ್ನ ಮಾಡಿದ್ದಾರೆ ಚನ್ನಕೇಶವ.

ತಮಿಳಿನ "ದೂಡಿ' ಹಾಗೂ ಕನ್ನಡದ "ರುದ್ರ ಗರುಡ ಪುರಾಣ' ಚಿತ್ರಗಳ ಖ್ಯಾತಿಯ ಸುನೀಲ್​ ನರಸಿಂಹಮೂರ್ತಿ ಛಾಯಾಗ್ರಹಣ, ಕಾಲಿವುಡ್​ನ ಜಿ.ವಿ. ಪ್ರಕಾಶ್​ ಕುಮಾರ್​ ತಂಡದಲ್ಲಿ ಪಳಗಿರುವ ಕೆ.ಸಿ. ಬಾಲಸಾರಂಗನ್​ ಸಂಗೀತ "ಅಂಶು'ಗೆ ಇರಲಿದೆ. ಈಗಾಗಲೇ ಚಿತ್ರದ ಟೀಸರ್​, ಟ್ರೇಲರ್​ ಮತ್ತು ಹಾಡುಗಳು ರಿಲೀಸ್​ ಆಗಿದ್ದು, ಸದ್ಯ ಚಿತ್ರತಂಡ ಸಿನಿಮಾ ಬಿಡುಗಡೆಯ ಸಿದ್ಧತೆಯಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net