ರಾಗಿಣಿ ಮನೆಯಲ್ಲಿತ್ತು ಗಾಂಜಾ ತುಂಬಿದ್ದ ಸಿಗರೇಟ್ !

Ragini New - Final
Published on

ಬೆಂಗಳೂರು: ನಟಿ ರಾಗಿಣಿ ದ್ವಿವೇದಿ ಅವರ ಮನೆ ಮೇಲೆ ದಾಳಿ ನಡೆಸಿದಾಗ ಗಾಂಜಾ ತುಂಬಿಟ್ಟಿದ್ದ ಸಿಗರೇಟ್​ಗಳು ಪತ್ತೆಯಾಗಿವೆ. ಈ ಬಗ್ಗೆ ಪ್ರಶ್ನಿಸಿದ್ದು, ‘ಸಿಗರೇಟ್ ಬಗ್ಗೆ ನನಗೇನೂ ಗೊತ್ತಿಲ್ಲ. ನಾನು ಎಂದಿಗೂ ಸಿಗರೇಟ್ ಸೇದಿಲ್ಲ’ ಎಂದು ಹೇಳಿಕೆ ನೀಡುತ್ತಿದ್ದಾಳೆ. ಅವುಗಳನ್ನು ಎಫ್​ಎಸ್​ಎಲ್ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ನಿಖರ ಮಾಹಿತಿ ಗೊತ್ತಾಗಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪಾರ್ಟಿಗೆ ಹೋದ ಮಾತ್ರಕ್ಕೆ ಮದ್ಯ ಸೇವಿಸಬೇಕೆ?: ನಟಿ ರಾಗಿಣಿ ದ್ವಿವೇದಿ ಅವರ ಮನೆ ಮೇಲೆ ದಾಳಿ ನಡೆಸಿದಾಗ ಗಾಂಜಾ ತುಂಬಿಟ್ಟಿದ್ದ ಸಿಗರೇಟ್​ಗಳು ಪತ್ತೆಯಾಗಿವೆ. ಈ ಬಗ್ಗೆ ಪ್ರಶ್ನಿಸಿದ್ದು, ಸಿಗರೇಟ್ ಬಗ್ಗೆ ನನಗೇನು ಗೊತ್ತಿಲ್ಲ. ಮದ್ಯ ಸೇರಿದಂತೆ ಯಾವುದೇ ರೀತಿಯ ಅಮಲಿನ ಪದಾರ್ಥಗಳನ್ನು ಸೇವಿಸುವುದಿಲ್ಲ. ಧೂಮಪಾನಿಯೂ ನಾನಲ್ಲ. ಅಲ್ಲದೆ, ಡ್ರಗ್ಸ್ ವಿರುದ್ಧ ಜಾಗೃತಿ ಮೂಡಿಸುವ ಎನ್​ಜಿಒದಲ್ಲಿ ಕೆಲಸ ಮಾಡುತ್ತಿದ್ದೇನೆ. ಸೆಲೆಬ್ರಿಟಿ ಆದ ಕಾರಣ ನನ್ನನ್ನು ಪಾರ್ಟಿಗೆ ಕರೆಯುತ್ತಾರೆ. ಹಾಗಾಗಿ ಹೋಗುತ್ತೇನೆ. ಪಾರ್ಟಿಗೆ ಹೋದ ಮಾತ್ರಕ್ಕೆ ಮದ್ಯ ಸೇವಿಸಬೇಕು ಎಂದೇನಿಲ್ಲ’ ಎಂದು ಹಾರಿಕೆಯ ಉತ್ತರ ನೀಡುತ್ತಿದ್ದಾಳೆ. ಆಕೆ ಮನೆಯಲ್ಲಿ ಪತ್ತೆಯಾದ ಸಿಗರೇಟ್ ಸೇರಿದಂತೆ ಕೆಲ ದಾಖಲೆಗಳನ್ನು ಎಫ್​ಎಸ್​ಎಲ್ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ನಿಖರ ಮಾಹಿತಿ ಗೊತ್ತಾಗಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಾರ್ಯಕ್ರಮ ಆಯೋಜಕಿಯ ವಿಚಾರಣೆ: ನಟ, ನಟಿಯರ ಜತೆ ಒಡನಾಟ ಹೊಂದಿದ್ದರು ಎನ್ನಲಾದ ಕಾರ್ಯಕ್ರಮ ಆಯೋಜಕಿ ಪೃಥ್ವಿ ಶೆಟ್ಟಿ ಮತ್ತು ಆಕೆಯ ಸ್ನೇಹಿತೆಯೊಬ್ಬರನ್ನು ಸಿಸಿಬಿ ಪೊಲೀಸರು ಭಾನುವಾರ ವಿಚಾರಣೆ ನಡೆಸಿದ್ದಾರೆ. ಎಚ್​ಎಸ್​ಆರ್ ಲೇಔಟ್ ನಿವಾಸಿ ಮಂಗಳೂರು ಮೂಲದವರಾದ ಪೃಥ್ವಿಕ್ ಶೆಟ್ಟಿ, ನಗರದಲ್ಲಿ ಕಾರ್ಯಕ್ರಮದ ಆಯೋಜಕಿಯಾಗಿದ್ದಾರೆ. ದೊಡ್ಡ ಮಟ್ಟ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ನಟಿ ರಾಗಿಣಿ ಸೇರಿದಂತೆ ಹಲವರ ಒಡನಾಟ ಇವರಿಗಿದೆ. ಪಾರ್ಟಿಗಳಲ್ಲಿ ಡ್ರಗ್ಸ್ ಪೂರೈಕೆ ಮಾಡಿರುವ ಶಂಕೆ ಮೇರೆಗೆ ಸಿಸಿಬಿ ನೋಟಿಸ್ ಜಾರಿ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net