

‘ಕಾಮಾಟಿಪುರದಲ್ಲಿ ಅಮವಾಸ್ಯೆಯಂದೂ ಕತ್ತಲಾಗಲ್ಲ. ಏಕೆಂದರೆ, ಅಲ್ಲಿ ಗಂಗೂಬಾಯಿ ಇರ್ತಾಳೆ. ಗಂಗೂ ಚಂದ್ರನಿದ್ದಂತೆ. ಯಾವತ್ತೂ ಮಿನುಗುತ್ತಲೇ ಇರುತ್ತಾಳೆ . ಸ್ವಾಭಿಮಾನದಿಂದಲೇ ಬದುಕಬೇಕು. ಯಾವನಿಗೂ ಹೆದರುವ ಅವಶ್ಯಕತೆಯಿಲ್ಲ ...’- ಹೀಗೆ ಖಡಕ್ ಡೈಲಾಗ್ ಮೂಲಕವೇ ಬಹುನಿರೀಕ್ಷಿತ ‘ಗಂಗೂಬಾಯಿ ಕಥೈವಾಡಿ’ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ.
ಹಿಂದೆಂದೂ ಕಾಣಿಸದ ಅವತಾರದಲ್ಲಿ ಆಲಿಯಾ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಟೈಟಲ್ ರೋಲ್ ನಿಭಾಯಿಸಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಗಂಗೂಬಾಯಿ ಕಥೈವಾಡಿ’ ಚಿತ್ರದಲ್ಲಿ ಮುಂಬೈನ ಕಾಮಾಟಿಪುರದ ಕ್ವೀನ್ ಆಗಿ ಆಲಿಯಾ ಪಾತ್ರ ಮೂಡಿಬಂದಿದೆ.
ಪ್ರಭಾಸ್ ವರ್ಸಸ್ ಆಲಿಯಾ: ಟೀಸರ್ ಜತೆಗೆ ಜುಲೈ 30ಕ್ಕೆ ಚಿತ್ರ ‘ಗಂಗೂಬಾಯಿ’ ಚಿತ್ರ ಬಿಡುಗಡೆ ಆಗಲಿದೆ ಎಂಬುದನ್ನೂ ತಂಡ ಘೋಷಿಸಿಕೊಂಡಿದೆ. ಅದೇ ದಿನ ಪ್ರಭಾಸ್ ಅಭಿನಯದ ‘ರಾಧೆ ಶ್ಯಾಮ್ ಸಿನಿಮಾ ಸಹ ಕನ್ನಡ ಸೇರಿ ಬಹುಭಾಷೆಗಳಲ್ಲಿ ಬಿಡುಗಡೆ ಆಗುತ್ತಿದ್ದು, ಬಾಕ್ಸ್ಆಫೀಸ್ನಲ್ಲಿ ಸ್ಪರ್ಧೆ ಏರ್ಪಡಲಿದೆ.