ಹಾಗಿದ್ದ ಗಣೇಶ್ ಆಚಾರ್ಯ, ಇದೀಗ ಹೀಗಾಗಿದ್ದಾರೆ ...

Ganesh Acharya - Final
Published on

ಮುಂಬೈ: ಸಿನಿಮಾ ಮಂದಿ ತೂಕ ಇಳಿಸಿಕೊಳ್ಳುವುದು, ಸಪೂರವಾಗಿದ್ದು ಸಹಜ. ಆದರೆ, ನೃತ್ಯ ನಿರ್ದೇಶಕ ಸಣ್ಣಗಾಗಿರುವುದು ರೀತಿ ಇದೆಯಲ್ಲಾ, ಅದು ಬರೀ ಆಶ್ಚರ್ಯಕರವಷ್ಟೇ ಅಲ್ಲ, ಹಲವರಿಗೆ ಸ್ಫೂರ್ತಿದಾಯಕ ಎಂದರೆ ತಪ್ಪಿಲ್ಲ.

ಇತ್ತೀಚೆಗೆ ಗಣೇಶ್​ ಆಚಾರ್ಯ ಅವರು, 'ದಿ ಕಪಿಲ್​ ಶರ್ಮ ಶೋ'ನಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಅವರ ಜತೆಗೆ ನೃತ್ಯ ನಿರ್ದೇಶಕರಾದ ಗೀತಾ ಕಪೂರ್​ ಮತ್ತು ಟೆರೆನ್ಸ್ ಲೂಯಿಸ್​ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಗಣೇಶ್​ ಆಚಾರ್ಯ ಅವರನ್ನು ನೋಡಿದವರೆಲ್ಲಾ, ಸಾಕಷ್ಟು ಆಶ್ಚರ್ಯಚಕಿತರಾಗಿದ್ದರು. ಆ ಮಟ್ಟಕ್ಕೆ ಗಣೇಶ್​ ಆಚಾರ್ಯ ತೂಕ ಇಳಿಸಿಕೊಂಡಿದ್ದಾರೆ.

ಇಷ್ಟಕ್ಕೂ ಗಣೇಶ್​ ಎಷ್ಟು ಕೆಜಿ ಎಳಿಸಿಕೊಂಡಿದ್ದಾರೆ ಎಂಬ ಪ್ರಶ್ನೆ ಬರುವುದು ಸಹಜ. ಗಣೇಶ್​ 98 ಕೆಜಿ ತೂಕ ಇಳಿಸಿಕೊಂಡಿದ್ದಾರಂತೆ. ಒಂದು ಕಾಲಕ್ಕೆ 200 ಕೆಜಿಯಷ್ಟಿದ್ದ ಅವರು 98 ಕೆಜಿ ಇಳಿಸಿಕೊಂಡಿದ್ದಾಗಿ ಅವರೇ ಹೇಳಿಕೊಂಡಿದ್ದಾರೆ. ಇದಕ್ಕೆ ಉತ್ತರಿಸಿದ ಕಪಿಲ್​, '40 ಕೆಜಿ ತೂಕದ ಇಬ್ಬರು ಮನುಷ್ಯರನ್ನು ಮಾಯ ಮಾಡಿದಿರಿ' ಎಂದು ನಗೆಚಟಾಕಿ ಹಾರಿಸಿದ್ದಾರೆ.

ಇನ್ನು ಗಣೇಶ್​, ಅಷ್ಟೊಂದು ತೂಕವನ್ನು ಇಳಿಸಿಕೊಂಡಿದ್ದು ಹೇಗೆ ಎಂಬ ಪ್ರಶ್ನೆ ಬರುವುದು ಸಹಜವೇ. ಅದಕ್ಕೆ ಉತ್ತರವಾಗಿ ಸಾಕಷ್ಟು ವರ್ಕೌಟ್​ ಮಾಡಿದ ವೀಡಿಯೋಗಳನ್ನು ಅವರು ಇನ್​ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ. ಬರೀ ತೂಕ ಇಳಿಸಿಕೊಂಡಿರುವುದಷ್ಟೇ ಅಲ್ಲ, ಸಾಕಷ್ಟು ಡಯಟ್​ ಮಾಡಿ ಸಹ ಅವರು ಸಪೂರರಾಗಿದ್ದಾರೆ ಎನ್ನುವುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net